ಅಗ್ನಿಪಥ್ ಯೋಜನೆ ಹಿಂಪಡೆಯಬೇಕು, ಇದರಿಂದ ಸೇನೆಗೆ ಅವಮಾನ: ಪಂಜಾಬ್ ಸಿಎಂ ಭಗವಂತ್ ಮಾನ್

ಸೇನಾ ನೇಮಕಾತಿ ಸಂಬಂಧ ಕೇಂದ್ರ ಸರ್ಕಾರದ ಘೋಷಿಸಿದ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು...
ಭಗವಂತ್ ಮಾನ್
ಭಗವಂತ್ ಮಾನ್

ಚಂಡೀಗಢ: ಸೇನಾ ನೇಮಕಾತಿ ಸಂಬಂಧ ಕೇಂದ್ರ ಸರ್ಕಾರದ ಘೋಷಿಸಿದ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಹ ಕೇಂದ್ರದ ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಎರಡು ವರ್ಷದಿಂದ ಸೇನೆಯಲ್ಲಿ ನೇಮಕಾತಿ ನಿಲ್ಲಿಸಿದ್ದ ಕೇಂದ್ರ ಸರ್ಕಾರ ಇದೀಗ 4 ವರ್ಷ ಸೇನೆಯಲ್ಲಿ ಇರುವಂತೆ ಹೊಸ ಆದೇಶ ಜಾರಿಗೆ ತಂದಿದೆ. ನಂತರ ಪಿಂಚಣಿ ಕೂಡ ಇಲ್ಲ. ಇದು ಕೂಡ ಸೇನೆಗೆ ಮಾಡಿದ ದೊಡ್ಡ ಅವಮಾನ. ದೇಶದ ಯುವಕರಿಗೂ ಮಾಡಿದ ಮೋಸವಾಗಿದೆ. ಇದು ದೇಶದ ಯುವಕರಿಗೆ ಕೋಪ ತರಿಸಿದೆ. ಕೇಂದ್ರ ಯೋಚಿಸದೆ ತೆಗೆದುಕೊಂಡ ನಿರ್ಧಾರದ ಫಲ ಇದು. ಕೇಂದ್ರ ಸರ್ಕಾರ ಕೂಡಲೇ ಅಗ್ನಿಪಥ್ ಯೋಜನೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿ, ಹರಿಯಾಣ, ಬಿಹಾರ, ಉತ್ತರಪ್ರದೇಶದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಗಳು ಮುಂದುವರೆದಿದ್ದು, ಹಲವೆಡೆ ರೈಲುಗಳನ್ನು ಸುಟ್ಟುಹಾಕಲಾಗಿದೆ. ತಮಿಳುನಾಡಿನಲ್ಲಿ ೩೫ ಪ್ರತಭಟನಾಕಾರರನ್ನು ಬಂಧಿಸಲಾಗಿದೆ. ಮಾಧೆಪುರದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com