ನನ್ನನ್ನು ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿಯನ್ನಾಗಿ ನೇಮಿಸಿ: ರಾಜ್ಯಪಾಲರಿಗೆ ವ್ಯಕ್ತಿಯ ಪತ್ರ
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವಂತೆಯೇ, ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿ ಎಂದು ಒತ್ತಾಯಿಸಿ ಬೀಡ್ ಜಿಲ್ಲೆಯ ವ್ಯಕ್ತಿಯೊಬ್ಬರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಪತ್ರ ಬರೆದಿದ್ದಾರೆ.
Published: 24th June 2022 04:15 PM | Last Updated: 24th June 2022 05:21 PM | A+A A-

ಸಾಂದರ್ಭಿಕ ಚಿತ್ರ
ಔರಂಗಬಾದ್: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವಂತೆಯೇ, ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿ ಎಂದು ಒತ್ತಾಯಿಸಿ ಬೀಡ್ ಜಿಲ್ಲೆಯ ವ್ಯಕ್ತಿಯೊಬ್ಬರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಪತ್ರ ಬರೆದಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿನ 37 ಶಿವಸೇನಾ ಶಾಸಕರು ಬಂಡಾಯವೆದ್ದಿರುವುದರಿಂದ ಶಿವಸೇನಾ ನೇತೃತ್ವದಲ್ಲಿನ ಮಹಾ ಆಘಾದಿ ಸರ್ಕಾರ ಅಸ್ವಿತ್ವ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಕೆಜ್ ತೆಹಸಿಲ್ ನ ದಹಿಫಲ್ ನಿವಾಸಿ ಶ್ರೀಕಾಂತ್ ಗಡಾಲೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದನ್ನೇ ಜಿಲ್ಲಾಧಿಕಾರಿ ಕಚೇರಿಗೂ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್
ಉದ್ದವ್ ಠಾಕ್ರೆ ಸಾಮಾನ್ಯ ಜನರು ಹಾಗೂ ರೈತರ ತೊಂದರೆಗಳನ್ನು ನಿರ್ಲಕ್ಷಿಸಿದ್ದಾರೆ.. ಕಳೆದ 10-12 ವರ್ಷಗಳಿಂದ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿದ್ದೇನೆ. ರೈತರು ಹಾಗೂ ಬಡ ಜನರ ತೊಂದರೆಗಳನ್ನು ನಿವಾರಿಸಲು ಕೆಲಸ ಮಾಡಿದ್ದೇನೆ. ಪ್ರಾಕೃತಿಕ ವಿಪತ್ತುಗಳಿಂದ ರಾಜ್ಯ ತೊಂದರೆ ಎದುರಿಸುತ್ತಿದೆ. ಸರ್ಕಾರ ಪರಿಹಾರ ನೀಡಬೇಕಾಗಿತ್ತು. ಆದರೆ, ಯಾವುದೇ ಸಹಾಯ ನೀಡಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.