ಅಹಮದಾಬಾದ್: ಮಕ್ಕಳ ಆಸ್ಪತ್ರೆ ಇರುವ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ, 13 ನವಜಾತ ಶಿಶುಗಳು ಸೇರಿದಂತೆ 75 ಜನರ ರಕ್ಷಣೆ
ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಮಕ್ಕಳ ಆಸ್ಪತ್ರೆ ಇರುವ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 13 ನವಜಾತ ಶಿಶುಗಳು ಸೇರಿದಂತೆ 75 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 25th June 2022 08:38 PM | Last Updated: 25th June 2022 08:38 PM | A+A A-

ಸಾಂದರ್ಭಿಕ ಚಿತ್ರ
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಮಕ್ಕಳ ಆಸ್ಪತ್ರೆ ಇರುವ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 13 ನವಜಾತ ಶಿಶುಗಳು ಸೇರಿದಂತೆ 75 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಪರಿಮಳ ಗಾರ್ಡನ್ ರಸ್ತೆಯಲ್ಲಿರುವ ದೇವ್ ಕಾಂಪ್ಲೆಕ್ ನಲ್ಲಿ ಇಂದು ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಮಕ್ಕಳ ಆಸ್ಪತ್ರೆಯಿಂದ 13 ನವಜಾತ ಶಿಶುಗಳು ಮತ್ತು ಅವರ ಪೋಷಕರು ಸೇರಿದಂತೆ 75 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 1-30ರ ಸುಮಾರಿನಲ್ಲಿ ಮೂರನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸುದ್ದಿ ತಿಳಿಯಿತು. ನಂತರ ಸುಮಾರು 20 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾಗಿ ಅಗ್ನಿಶಾಮಕ ಅಧಿಕಾರಿ ಓಂ ಜಡೇಜಾ ತಿಳಿಸಿದ್ದಾರೆ.
ಐಸಿಯುನಲ್ಲಿದ್ದ ಮೂರು ಶಿಶುಗಳು ಸೇರಿದಂತೆ 13 ನವಜಾತ ಶಿಶುಗಳು, 75 ಜನರು ಹಾಗೂ ಅವರ ಪೋಷಕರನ್ನು ಕಟ್ಟಡದ ಟೆರೆಸ್ ಗೆ ಸ್ಥಳಾಂತರಿಸಿ ರಕ್ಷಿಸಲಾಗಿದೆ. ನಂತರ ಎಲ್ಲಾ ರೋಗಿಗಳನ್ನು ಆಂಬ್ಯುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದ್ದಾರೆ.
ಕೆಲ ತಾಸುಗಳ ನಂತರ ಬೆಂಕಿ ತಹಬದಿಗೆ ಬಂದಿದ್ದು, ಯಾವುದೇ ಹಾನಿ ಬಗ್ಗೆ ವರದಿಯಾಗಿಲ್ಲ, ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.