'ಗುವಾಹಟಿಯಲ್ಲಿ ಎಷ್ಟು ದಿನ ಬಚ್ಚಿಟ್ಟುಕೊಳ್ಳುವಿರಿ, ಹೊರಗೆ ಬರಲೇಬೇಕು: ಶಿವಸೇನೆ ಬಂಡಾಯ ಶಾಸಕರಿಗೆ ರಾವತ್
ಗುವಾಹಟಿಯಲ್ಲಿ ಇನ್ನೆಷ್ಟು ದಿನ ಬಚ್ಚಿಟ್ಟುಕೊಳ್ಳುವಿರಿ, ಹೊರಗೆ ಬರಲೇಬೇಕು ಎಂದು ಶಿವಸೇನೆ ಬಂಡಾಯ ಶಾಸಕರಿಗೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಭಾನುವಾರ ಹೇಳಿದ್ದಾರೆ.
Published: 26th June 2022 11:12 AM | Last Updated: 26th June 2022 11:12 AM | A+A A-

ಸಂಜಯ್ ರಾವತ್
ಮುಂಬೈ: ಗುವಾಹಟಿಯಲ್ಲಿ ಇನ್ನೆಷ್ಟು ದಿನ ಬಚ್ಚಿಟ್ಟುಕೊಳ್ಳುವಿರಿ, ಹೊರಗೆ ಬರಲೇಬೇಕು ಎಂದು ಶಿವಸೇನೆ ಬಂಡಾಯ ಶಾಸಕರಿಗೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಭಾನುವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಗುವಾಹಟಿಯಲ್ಲಿ ಇನ್ನೆಷ್ಟು ದಿನ ಬಚ್ಚಿಟ್ಟುಕೊಳ್ಳುವಿರಿ, ಚೌಪಟ್ಟಿಗೆ ಬರಲೇಬೇಕು ಎಂದು ಹೇಳಿದ್ದಾರೆ.
कब तक छीपोगे गोहातीमे..
आना हि पडेगा.. चौपाटीमे.. pic.twitter.com/tu4HcBySSO— Sanjay Raut (@rautsanjay61) June 26, 2022
ಈ ನಡುವೆ : ಶಿವಸೇನಾದ ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ ಶಿಂಧೆ ಅವರು ಇಂದು ಮಧ್ಯಾಹ್ನ 12ಕ್ಕೆ ಶಾಸಕರ ಸಭೆ ಕರೆದಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಗುವಾಹಟಿಯ ಹೋಟೆಲ್‌ನಲ್ಲೇ ಸಭೆ ಕರೆದಿರುವುದಾಗಿ ವರದಿಯಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾದ 16 ಶಾಸಕರಿಗೆ ವಿಧಾನಸಭಾ ಕಾರ್ಯಾಲಯವು ನೋಟಿಸ್ ನೀಡಿದೆ. ಸೋಮವಾರ ಸಂಜೆಯ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ಏಕನಾಥ ಶಿಂಧೆ ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.