ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ ಕೃಷ್ಣಮೂರ್ತಿ ನಿಧನ
ಸಾರ್ವಜನಿಕ ವಲಯದ ಉದ್ದಿಮೆ ಭಾರತೀಯ ಉಕ್ಕು ಪ್ರಾಧಿಕಾರ(ಎಸ್ಎಐಎಲ್)ದ ಮಾಜಿ ಅಧ್ಯಕ್ಷ ಹಾಗೂ ಮಾರುತಿ ಉದ್ಯೋಗ್ ಲಿಮಿಟೆಡ್‌ನ(ಈಗ ಮಾರುತಿ ಸುಜುಕಿ) ಮಾಜಿ ಅಧ್ಯಕ್ಷರಾದ ವಿ ಕೃಷ್ಣಮೂರ್ತಿ ಅವರು ಭಾನುವಾರ...
Published: 27th June 2022 12:49 AM | Last Updated: 27th June 2022 12:49 AM | A+A A-

ವಿ ಕೃಷ್ಣಮೂರ್ತಿ
ನವದೆಹಲಿ: ಸಾರ್ವಜನಿಕ ವಲಯದ ಉದ್ದಿಮೆ ಭಾರತೀಯ ಉಕ್ಕು ಪ್ರಾಧಿಕಾರ(ಎಸ್ಎಐಎಲ್)ದ ಮಾಜಿ ಅಧ್ಯಕ್ಷ ಹಾಗೂ ಮಾರುತಿ ಉದ್ಯೋಗ್ ಲಿಮಿಟೆಡ್‌ನ(ಈಗ ಮಾರುತಿ ಸುಜುಕಿ) ಮಾಜಿ ಅಧ್ಯಕ್ಷರಾದ ವಿ ಕೃಷ್ಣಮೂರ್ತಿ ಅವರು ಭಾನುವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಕೃಷ್ಣಮೂರ್ತಿ ಅವರು ಚೆನ್ನೈನಲ್ಲಿರುವ ಅವರ ಮನೆಯಲ್ಲಿ ಇಂದು ನಿಧನರಾದರು ಎಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಎಸ್ಎಐಎಲ್ ಪ್ರಕಟಣೆ ತಿಳಿಸಿದೆ.
ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಕೃಷ್ಣಮೂರ್ತಿ ಅವರ ಅಂತಿಮ ಸಂಸ್ಕಾರ ಸೋಮವಾರ ನೆರವೇರಲಿದೆ.
ವಿ ಕೃಷ್ಣಮೂರ್ತಿ ಅವರು 1985 ರಿಂದ 1990 ರವರೆಗೆ ಎಸ್ಎಐಎಲ್ ನ ಅಧ್ಯಕ್ಷರಾಗಿದ್ದರು. ಅಲ್ಲದೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(BHEL),ಮಾರುತಿ ಉದ್ಯೋಗ್ ಮತ್ತು GAILನ ಅಧ್ಯಕ್ಷರಾಗಿಯೂ ಕೃಷ್ಣಮೂರ್ತಿ ಸೇವೆ ಸಲ್ಲಿಸಿದ್ದರು.