ದಾವೂದ್ ಜೊತೆ ನಂಟು ಹೊಂದಿರುವವರಿಗೆ ಶಿವಸೇನೆ ಬೆಂಬಲದ ವಿರುದ್ಧ ಬಂಡಾಯವೆದ್ದಿದ್ದೇವೆ, ಸಾವಿಗೆ ಹೆದರುವುದಿಲ್ಲ: ಏಕನಾಥ್ ಶಿಂಧೆ

ದಾವೂದ್ ಇಬ್ರಾಹಿಂನೊಂದಿಗೆ ಕೆಲ ನಾಯಕರು ನೇರ ಸಂಪರ್ಕ ಹೊಂದಿದ್ದು, ಇವರಿಗೆ ಬಾಳ್ ಠಾಕ್ರೆ ಅವರ ಪಕ್ಷವು ಬೆಂಬಲಿಸುತ್ತಿದೆ. ಇದರ ವಿರುದ್ಧ ನಾವು ಬಂಡಾಯ ಎದ್ದಿದ್ದೇವೆ. ಜೀವಕ್ಕೆ ಹೆದರುವುದಿಲ್ಲ ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ

ಮುಂಬೈ: ಬಾಂಬ್ ಸ್ಫೋಟಗಳನ್ನು ಪ್ರಚೋದಿಸುವ ಮೂಲಕ ಅಮಾಯಕ ಮುಂಬೈ ನಿವಾಸಿಗಳನ್ನು ಹತ್ಯೆ ಮಾಡಿದ ದಾವೂದ್ ಇಬ್ರಾಹಿಂನೊಂದಿಗೆ ಕೆಲ ನಾಯಕರು ನೇರ ಸಂಪರ್ಕ ಹೊಂದಿದ್ದು, ಇವರಿಗೆ ಬಾಳ್ ಠಾಕ್ರೆ ಅವರ ಪಕ್ಷವು ಬೆಂಬಲಿಸುತ್ತಿದೆ. ಇದರ ವಿರುದ್ಧ ನಾವು ಬಂಡಾಯ ಎದ್ದಿದ್ದೇವೆ. ಜೀವಕ್ಕೆ ಹೆದರುವುದಿಲ್ಲ ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.

ನಿನ್ನೆ ರಾತ್ರಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿಸುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಚಿವ ನವಾಬ್ ಮಲಿಕ್ ದಾವೂದ್ ಇಬ್ರಾಹಿಂ ಜೊತೆಗೆ ನಂಟು ಹೊಂದಿದ್ದಾರೆಂದು ಹೇಳಿದರು. 

ಈ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಯಾರನ್ನು ನಂಬಬೇಕೆಂಬ ಪಾಠವನ್ನು ನಾವು ಕಲಿತಿದ್ದೇವೆ... ಆತ್ಮವೇ ಇಲ್ಲದ ದೇಹ ನಿಮ್ಮದು. ನಿಮ್ಮ ಮನಸ್ಸು ಸತ್ತುಹೋಗಿದೆ. ಆತ್ಮವಿಲ್ಲದ 40 ದೇಹಗಳು ಅಸ್ಸಾಂನಿಂದ ಬರುತ್ತವೆ. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೇರವಾಗಿ ಶವಾಗಾರಕ್ಕೆ ಕಳುಹಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿಂಧೆ, "ಮುಂಬೈ ಬಾಂಬ್ ಸ್ಫೋಟ ನಡೆಸಿ ಅಮಾಯಕರಾದ ಮುಂಬೈ ನಿವಾಸಿಗಳನ್ನು ಕೊಂದ ದಾವೂದ್ ನೊಂದಿಗೆ ನೇರ ಸಂಪರ್ಕ ಹೊಂದಿರುವವರನ್ನು ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆ ಹೇಗೆ ಬೆಂಬಲಿಸುತ್ತದೆ? ಇದನ್ನು ವಿರೋಧಿಸಲು ನಾವು ಈ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ; ಈ ಕ್ರಮವು ನಮ್ಮನ್ನು ಅಂಚಿಗೆ ಕೊಂಡೊಯ್ಯುತ್ತದೆಯೇ ಎಂದು ಚಿಂತಿಸಬೇಡಿ. ನಾವು ಸಾವಿಗೆ ಹೆದರುವುದಿಲ್ಲ ಎಂದು ತಿಳಿಸಿದರು. 

ಮತ್ತೊಂದು ಟ್ವೀಟ್ ನಲ್ಲಿ ಶಿವಸೇನೆ ಮತ್ತು ಬಾಳ್ ಠಾಕ್ರೆ ಅವರ ಸಿದ್ಧಾಂತವನ್ನು ಉಳಿಸುವಾಗ ನಾವು ಸತ್ತರೆ ನಮ್ಮನ್ನು ನವು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇವೆ ಎಂದಿದ್ದಾರೆ. ಈ ಟ್ವೀಟ್ ನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಅವರಿಗೂ ಟ್ಯಾಗ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com