ಈ ವರ್ಷ ಚಾರ್ ಧಾಮ್ ಯಾತ್ರೆಯಲ್ಲಿ 203 ಯಾತ್ರಾರ್ಥಿಗಳ ಸಾವು

ಈ ವರ್ಷ ಚಾರ್ ಧಾಮ್ ಯಾತ್ರೆಯಲ್ಲಿ ಪ್ರತಿಕೂಲ ಹವಾಮಾನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಇಲ್ಲಿಯವರೆಗೂ ಸುಮಾರು 203 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.
ಕೇದರ್ ನಾಥ್ ದೇವಾಲಯ
ಕೇದರ್ ನಾಥ್ ದೇವಾಲಯ

ಉತ್ತರಾಖಂಡ್: ಈ ವರ್ಷ ಚಾರ್ ಧಾಮ್ ಯಾತ್ರೆಯಲ್ಲಿ ಪ್ರತಿಕೂಲ ಹವಾಮಾನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಇಲ್ಲಿಯವರೆಗೂ ಸುಮಾರು 203 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.

ಅಕ್ಷಯ ತೃತೀಯ ದಿನವಾದ ಮೇ 3 ರಂದು ಚಾರ್ ಧಾಮ್ ಯಾತ್ರೆ ಆರಂಭವಾಗಿತ್ತು. ಬಹುತೇಕ ಭಕ್ತಾಧಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಠಿಣವಾದ ಪರ್ವತ ಹವಾಮಾನವು ಅನೇಕ ಜನರ ವಿಶೇಷವಾಗಿ ವಯಸ್ಸಾದ ಯಾತ್ರಿಕರ ಅನಾರೋಗ್ಯ ಉಲ್ಬಣಕ್ಕೆ ಕಾರಣವಾಗಿದೆ. ಅಂತವರಿಗೆ  ಏರ್ ಆಂಬ್ಯುಲೆನ್ಸ್ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ನೆರವನ್ನು ಒದಗಿಸಲಾಯಿತು.

ಅಧಿಕೃತ ಅಂಕಿಅಂಶಗಳ ಪ್ರಕಾರ, ಜೂನ್ 26 ರವರೆಗೆ ಚಾರ್ ಧಾಮ್ ಯಾತ್ರೆ ಕೈಗೊಂಡಿದ್ದ 203 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಈ ಪೈಕಿ 97 ಭಕ್ತರು ಕೇದಾರ್ ನಾಥ್ ನಲ್ಲಿ, 51 ಮಂದಿ ಬದ್ರಿನಾಥ್ ನಲ್ಲಿ, 42 ಜನರು ಯಮುನೋತ್ರಿ ಹಾಗೂ 13 ಮಂದಿ ಗಂಗೋತ್ರಿಯಲ್ಲಿ ಸಾವನ್ನಪ್ಪಿದ್ದಾರೆ.

ಸತತವಾಗಿ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತಿದೆ. ಭಕ್ತಾಧಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಆರೋಗ್ಯ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ಆದ್ದರಿಂದ ಅವುಗಳನ್ನು ಯಾತ್ರಿಕರು ಅನುಸರಿಸುತ್ತಿದ್ದು, ಪ್ರಯಾಣ ಸುಗಮಕರವಾಗಿದೆ ಎಂದು ಉತ್ತರ ಖಂಡ್ ಆರೋಗ್ಯ ಸಚಿವ ಧನ್ ಸಿಂಗ್ ರಾವತ್ ಹೇಳಿದ್ದಾರೆ.

ಚಾರ್ ಧಾಮ್ ಯಾತ್ರೆ ವೇಳೆ ಸಾವು ಇದೇ ಮೊದಲೇನಲ್ಲ ಆದರೆ, ಈ ವರ್ಷ ಮೃತರ ಸಂಖ್ಯೆ ಹೆಚ್ಚಾಗಿದೆ. 2019ರಲ್ಲಿ ಕೇವಲ 90 ಜನರು ಪ್ರತಿಕೂಲ ಹವಾಮಾನದಿಂದ ಸಾವನ್ನಪ್ಪಿದ್ದರು. ಅಧಿಕೃತ ಅಂದಾಜಿನಂತೆ ಕೇವಲ ಎರಡೂವರೆ ತಿಂಗಳಲ್ಲಿ 2.5 ಲಕ್ಷ ಭಕ್ತರು ಚಾರ್ ಧಾಮ್ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com