ಟೈಲರ್ ಹತ್ಯೆ ಪ್ರಕರಣ: ಇದು ಸಾಮಾನ್ಯ ಘಟನೆಯಲ್ಲ, ಹತ್ಯೆ ಹಿಂದಿನ ಪಿತೂರಿ ಶೀಘ್ರದಲ್ಲೇ ಬಹಿರಂಗ- ರಾಜಸ್ಥಾನ ಸಿಎಂ
ಟೈಲರ್ ಕನ್ನಯ್ಯಾ ಲಾಲ್ ಶಿರಚ್ಛೇದ ಮಾಡಿರುವ ಘಟನೆ ಸಾಮಾನ್ಯ ಘಟನೆಯಲ್ಲ. ಹತ್ಯೆ ಹಿಂದಿರುವ ಪಿತೂರಿಯನ್ನು ಕಂಡುಹಿಡಿಯಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬುಧವಾರ ಹೇಳಿದ್ದಾರೆ.
Published: 29th June 2022 11:30 AM | Last Updated: 29th June 2022 02:10 PM | A+A A-

ಅಶೋಕ್ ಗೆಹ್ಲೋಟ್
ಜೈಪುರ: ಟೈಲರ್ ಕನ್ನಯ್ಯಾ ಲಾಲ್ ಶಿರಚ್ಛೇದ ಮಾಡಿರುವ ಘಟನೆ ಸಾಮಾನ್ಯ ಘಟನೆಯಲ್ಲ. ಹತ್ಯೆ ಹಿಂದಿರುವ ಪಿತೂರಿಯನ್ನು ಕಂಡುಹಿಡಿಯಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಾಮಾನ್ಯ ಘಟನೆಯಲ್ಲ. ಹತ್ಯೆ ಹಿಂದಿರುವ ಪಿತೂರಿ ಹಾಗೂ ಲಿಂಕ್ ಗಳನ್ನು ಕಂಡು ಹಿಡಿಯಲಾಗುವುದು. ಘಟನೆ ಸಂಬಂಧ ಸಭೆ ಕರೆಯಲಾಗಿದ್ದು, ಸಭೆ ಬಳಿಕ ಮಾಹಿತಿಗಳನ್ನು ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯಸ್ಥಾನದ ಹೆಚ್ಚುವರಿ (ಎಸಿಬಿ) ಡಿಜಿಪಿ ದಿನೇಶ್ ಎಂಎನ್ ಅವರು ಮಾತನಾಡಿ, ಪ್ರಕರಣ ಸಂಬಂಧ ಬಂಧಿತನಾಗಿರುವ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕ್ರಮ ಕೈಗಳ್ಳಲಾಗುವುದು. ಮೃತರ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರವನ್ನೂ ನೀಡಲಾಗುವುದು. ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿ ಶಾಂತಿಯುತವಾಗಿದ್ದು, ಜನರೂ ಕೂಡ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.