ಉದಯಪುರ ಟೈಲರ್ ಹತ್ಯೆ: ಸಂತ್ರಸ್ಥ ಕುಟುಂಬ ಭೇಟಿ ಮಾಡಿದ ಸಿಎಂ ಗೆಹ್ಲೋಟ್, ಜೈಪುರ ಮಾರುಕಟ್ಟೆ ಸ್ಥಗಿತ
ಇಬ್ಬರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಅವರ ಮನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಭೇಟಿ ನೀಡಿದರು.
Published: 30th June 2022 03:24 PM | Last Updated: 30th June 2022 03:24 PM | A+A A-

ಅಶೋಕ್ ಗೆಹ್ಲೋಟ್
ಉದಯಪುರ: ಇಬ್ಬರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಅವರ ಮನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಭೇಟಿ ನೀಡಿದರು.
ಕನ್ಹಯ್ಯಾ ಲಾಲ್ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಮುಖ್ಯಮಂತ್ರಿ ಗೆಹ್ಲೋಟ್ ಮಾತನಾಡಿದರು. ಗೆಹ್ಲೋಟ್ ಅವರು ಪಕ್ಷದ ಮುಖಂಡ ಗೋವಿಂದ್ ಸಿಂಗ್ ದೋತಾಸ್ರಾ, ಕಂದಾಯ ಸಚಿವ ರಾಮಲಾಲ್ ಜಾಟ್, ಡಿಜಿಪಿ ಎಂಎಲ್ ಲಾಥರ್ ಮತ್ತು ಇತರ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಇಲ್ಲಿನ ಸೆಕ್ಟರ್ 14 ರಲ್ಲಿ ಲಾಲ್ ಅವರ ಮನೆಗೆ ಭೇಟಿ ನೀಡಿದ್ದರು. ಇದೇ ವೇಳೆ ಲಾಲ್ ಕುಟುಂಬಸ್ಥರಿಗೆ ಗೆಹ್ಲೋಟ್ ಸಾಂತ್ವನ ಹೇಳಿದರು.
उदयपुर की घटना ने पूरे देश को हिलाकर रख दिया जिस तरीके से हत्या की गयी वो जघन्य अपराध है।हमने तत्काल, त्वरित कार्रवाई करते हुए दोनों को पकड़ लिया, SOG ATS को केस दे दिया और रातभर में ही पता लगा लिया अंतर्राष्ट्रीय संगठनों से संबंधित है ये घटना,मायने हैं आतंकवाद से संबंधित घटना है pic.twitter.com/kZ9muNmvI4
— Ashok Gehlot (@ashokgehlot51) June 30, 2022
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉದಯ್‌ಪುರ ಕೊಲೆ ಪ್ರಕರಣವನ್ನು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಮತ್ತು ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು. ಘಟನಾ ಪ್ರದೇಶದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಗೆಹ್ಲೋಟ್ ಹೇಳಿದರು.
ಇದನ್ನೂ ಓದಿ: ಉದಯಪುರ: ಟೈಲರ್‌ನ ಅಮಾನುಷ ಹತ್ಯೆ ಖಂಡಿಸಿ ಬೃಹತ್ ರ್ಯಾಲಿ; ಸಾವಿರಾರು ಮಂದಿ ಭಾಗಿ
ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಎಂದು ಆನ್‌ಲೈನ್‌ನಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ ಇಬ್ಬರು ವ್ಯಕ್ತಿಗಳು ಮಂಗಳವಾರ ಟೈಲರ್ ಕನ್ಹಯ್ಯ ಲಾಲ್ ರನ್ನು ಕೊಂದಿದ್ದರು. ಈ ಘಟನೆ ಬಳಿಕ ಉದಯಪುರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಲಾಲ್ ಅವರ ಭೀಕರ ಹತ್ಯೆಯ ವಿರುದ್ಧ ಇಲ್ಲಿ ಗುರುವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಹಿಂದೂ ಸಂಘಟನೆಗಳಿಂದ ‘ಸರ್ವ ಹಿಂದೂ ಸಮಾಜ’ ರ್ಯಾಲಿಗೆ ಕರೆ ನೀಡಲಾಗಿದ್ದು, ಜಿಲ್ಲಾಡಳಿತದ ಅನುಮತಿಯೊಂದಿಗೆ ಟೌನ್ ಹಾಲ್ ನಿಂದ ಕಲೆಕ್ಟರೇಟ್ ವರೆಗೆ ಶಾಂತಿಯುತವಾಗಿ ನಡೆಯಿತು. ನಗರದ ಏಳು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಲಾಲ್ ಅವರ ಅಂತ್ಯಕ್ರಿಯೆ ಬುಧವಾರ ಅಪಾರ ಸಂಖ್ಯೆಯ ಜನರ ಸಮ್ಮುಖದಲ್ಲಿ ನೆರವೇರಿತು.
ಇದನ್ನೂ ಓದಿ: ರಾಜಸ್ಥಾನ ಸರ್ವಪಕ್ಷ ಸಭೆಯಲ್ಲಿ ಟೈಲರ್ ಹತ್ಯೆಗೆ ತೀವ್ರ ಖಂಡನೆ: ಕನ್ಹಯ್ಯಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ
ಖಾತಿಪುರ, ವೈಶಾಲಿ ನಗರ, ರಾಜಪಾರ್ಕ್, ಟೋಂಕ್ ರಸ್ತೆ, ಬಜಾಜ್ ನಗರ, ಮಾಳವೀಯ ನಗರ, ಸಂಗನೇರ್ ಸೇರಿದಂತೆ ಇತರ ಪ್ರದೇಶಗಳಲ್ಲಿಯೂ ಸುಮಾರು ಮಾರುಕಟ್ಟೆ ಮುಚ್ಚಲಾಗಿದೆ. ಹೆಚ್ಚುವರಿ ಡಿಸಿಪಿ ಉತ್ತರ ಧರ್ಮೇಂದ್ರ ಸಾಗರ್ ಅವರು ಎಲ್ಲಾ ಅಧಿಕಾರಿಗಳು ಕ್ಷೇತ್ರದಲ್ಲಿದ್ದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ ಮತ್ತು ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಉದಯ್ ಪುರ ಟೈಲರ್ ಶಿರಚ್ಛೇದ ಮಾಡಿದ ಹಂತಕರಿಗೆ ಪಾಕ್ ಸಂಘಟನೆ ನಂಟು, 2014 ರಲ್ಲಿ ಕರಾಚಿಗೆ ಭೇಟಿ!
ಏತನ್ಮಧ್ಯೆ, ಉದಯಪುರದಲ್ಲಿ ಟೈಲರ್‌ನ ಕ್ರೂರ ಹತ್ಯೆಯನ್ನು ಪ್ರತಿಭಟಿಸಿ ವ್ಯಾಪಾರಿಗಳ ಸಂಸ್ಥೆ ಮತ್ತು ವಿಶ್ವ ಹಿಂದೂ ಪರಿಷತ್ ನೀಡಿದ ಬಂದ್ ಕರೆ ನಂತರ ಜೈಪುರದ ಬಹುತೇಕ ಭಾಗಗಳಲ್ಲಿ ಗುರುವಾರ ಮಾರುಕಟ್ಟೆಗಳು ಮುಚ್ಚಲ್ಪಟ್ಟವು. ಬಂದ್ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಉದಯಪುರದಲ್ಲಿ ಪೊಲೀಸರನ್ನು ಬಿಗಿ ಬಂದೋಬಸ್ತ್ ಮಾಡಲಾಗಿದೆ ಮತ್ತು ಇಬ್ಬರು ಹೆಚ್ಚುವರಿ ಮಹಾನಿರ್ದೇಶಕರು, ಒಬ್ಬರು ಉಪ ಐಜಿ ಮತ್ತು ಇತರ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.