ಒಂದು ಕಾಲದಲ್ಲಿ ಉತ್ತರ ಪ್ರದೇಶವನ್ನು ಆಳಿದ್ದ ಬಿಎಸ್ ಪಿಗೆ ಇಂದು ಅಸ್ತಿತ್ವದ ಕೊರತೆ: ಕೇವಲ 3 ಕ್ಷೇತ್ರಗಳಲ್ಲಿ ಮುನ್ನಡೆ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬಹುಜನ ಸಮಾಜವಾದಿ ಪಕ್ಷ ಅಚ್ಚರಿ ಮೂಡಿಸಲಿದೆ ಎಂದು ನಾಯಕಿ ಮಾಯಾವತಿ ಅವರು ಚುನಾವಣಾ ಪೂರ್ವ ಹೇಳಿಕೆ ನೀಡಿದ್ದರೂ, ರಾಜ್ಯದಲ್ಲಿನ 403 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷವು ಕೇವಲ ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
Published: 10th March 2022 01:52 PM | Last Updated: 10th March 2022 01:52 PM | A+A A-

ಬಿಎಸ್ ಪಿ ನಾಯಕಿ ಮಾಯಾವತಿ
ಲಕ್ನೊ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬಹುಜನ ಸಮಾಜವಾದಿ ಪಕ್ಷ ಅಚ್ಚರಿ ಮೂಡಿಸಲಿದೆ ಎಂದು ನಾಯಕಿ ಮಾಯಾವತಿ ಅವರು ಚುನಾವಣಾ ಪೂರ್ವ ಹೇಳಿಕೆ ನೀಡಿದ್ದರೂ, ರಾಜ್ಯದಲ್ಲಿನ 403 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷವು ಕೇವಲ ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
2017ರಂತೆ ಈ ಬಾರಿ ಕೂಡ ರಾಷ್ಟ್ರೀಯ ಪಕ್ಷವಾಗಿರುವ ಬಿಎಸ್ ಪಿ ಎಲ್ಲಾ ಕ್ಷೇತ್ರಗಳಲ್ಲಿಯೂ ಗೆದ್ದುಕೊಂಡಿದ್ದರೂ ಬಎಸ್ ಪಿಯ ಭದ್ರ ಕೋಟೆಯಾಗಿದ್ದ ಆಗ್ರಾ ಮತ್ತು ಅಂಬೇಡ್ಕರ್ ನಗರದಲ್ಲಿ ಕೂಡ ಕಳಪೆ ಪ್ರದರ್ಶನ ತೋರಿಸುತ್ತಿದೆ.
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಮಧ್ಯಾಹ್ನ 12:50 ಕ್ಕೆ, ಬಿಎಸ್‌ಪಿ ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಶೇಕಡಾ 12.85 ರಷ್ಟು ಮತಗಳನ್ನು ಹೊಂದಿತ್ತು, ಬಿಎಸ್ ಪಿ ಸದ್ಯ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ.
2017ರಲ್ಲಿ ಬಲ್ಲಿಯಾದಲ್ಲಿ ರಾಸಾರಾ ಕ್ಷೇತ್ರದಿಂದ ಗೆದ್ದಿದ್ದ ಬಿಎಸ್‌ಪಿಯ ಉಮಾಶಂಕರ್ ಸಿಂಗ್ ಅವರು ಸಮೀಪದ ಎಸ್‌ಬಿಎಸ್‌ಪಿ ಪ್ರತಿಸ್ಪರ್ಧಿ ಮಹೇಂದ್ರ ಅವರಿಗಿಂತ ಸುಮಾರು 2,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅಂಬೇಡ್ಕರ್‌ನಗರ ಜಿಲ್ಲೆಯ ಹಾಪುರ್, ಜಲಾಲ್‌ಪುರ ಮತ್ತು ಸಂತ ಕಬೀರ್‌ನಗರ ಜಿಲ್ಲೆಯ ಮೆಹದಾವಲ್‌ನಲ್ಲಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ 401 ಸ್ಥಾನಗಳ ಫಲಿತಾಂಶಗಳ ಚಿತ್ರಣ ಸಿಗುತ್ತಿವೆ. 2017 ರ ವಿಧಾನಸಭಾ ಚುನಾವಣೆಯಲ್ಲಿ, ಬಿಎಸ್ಪಿ ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸಿ 19 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. 81 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತ್ತು. 2017 ರಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಪಕ್ಷವು ಶೇಕಡಾ 22 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿತ್ತು.
ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ನಮ್ಮ ಪಕ್ಷ ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಫೆಬ್ರವರಿ 14 ರಂದು ಒರೈನಲ್ಲಿ ರ್ಯಾಲಿಯನ್ನುದ್ದೇಶಿಸಿ ಹೇಳಿದ್ದರು. ಯುಪಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಅಂತಿಮ ಫಲಿತಾಂಶಗಳು ಇನ್ನೂ ಪ್ರಕಟವಾಗಬೇಕಿದೆ.