ಭಗವಂತ್ ಮಾನ್ - ಅರವಿಂದ್ ಕೇಜ್ರಿವಾಲ್
ಭಗವಂತ್ ಮಾನ್ - ಅರವಿಂದ್ ಕೇಜ್ರಿವಾಲ್

ಐತಿಹಾಸಿಕ ಖಟ್ಕರ್ಕಲನ್ ನಲ್ಲಿ ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ

ಪಂಜಾಬ್ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಅಧಿಕಾರಕ್ಕೇರಲಿದೆ. ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಧುರಿ ಕ್ಷೇತ್ರದಲ್ಲಿ  ಜಯದ ಪತಾಕೆ
Published on

ಧುರಿ: ಪಂಜಾಬ್ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಅಧಿಕಾರಕ್ಕೇರಲಿದೆ. ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಧುರಿ ಕ್ಷೇತ್ರದಲ್ಲಿ  ಜಯದ ಪತಾಕೆ ಹಾರಿಸಿದ್ದು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‌ಶಹರ್ ಜಿಲ್ಲೆಯ ಖಟ್ಕರ್‌ಕಲನ್‌ನಲ್ಲಿ ಪಂಜಾಬ್‌ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಖಟ್ಕರ್‌ಕಲನ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಎಎಪಿ ಕ್ಲೀನ್ ಸ್ವೀಪ್‌ ಮಾಡಿದ ನಂತರ ಧುರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮಾನ್, ಪ್ರಮಾಣ ವಚನ ಸ್ವೀಕಾರ ಸಮಾರಂಭವು ರಾಜಭವನದಲ್ಲಿ ನಡೆಯುವುದಿಲ್ಲ. ಆದರೆ ಖಟ್ಕರ್ಕಲನಲ್ಲಿ ನಡೆಯಲಿದೆ. ದಿನಾಂಕವನ್ನು ನಂತರ ಪ್ರಕಟಿಸಲಾಗುವುದು" ಎಂದು ಹೇಳಿದ್ದಾರೆ. 

ಯಾವುದೇ ಸರ್ಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಹಾಕುವುದಿಲ್ಲ. ಬದಲಾಗಿ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಭಗತ್ ಸಿಂಗ್ ಮತ್ತು ಡಾ.ಬಿಆರ್ ಅಂಬೇಡ್ಕರ್ ಅವರ ಫೋಟೋಗಳನ್ನು ಹಾಕಲಾಗುವುದು ಎಂದು ಮಾನ್ ತಿಳಿಸಿದ್ದಾರೆ. 

ಶಾಲೆಗಳ ಸ್ಥಿತಿ ಸುಧಾರಿಸುವುದು, ಆರೋಗ್ಯ ಮೂಲಸೌಕರ್ಯ, ಕೈಗಾರಿಕೆಯನ್ನು ಮರಳಿ ತರುವುದು, ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ಕ್ರೀಡಾ ಮೂಲಸೌಕರ್ಯವನ್ನು ಸುಧಾರಿಸುವುದಕ್ಕೆ ನಮ್ಮ ಸರ್ಕಾರ ಒತ್ತು ನೀಡಲಿದೆ. ಎಲ್ಲ ಗ್ರಾಮಗಳಲ್ಲಿ ಕ್ರೀಡಾ ಟ್ರ್ಯಾಕ್‌ಗಳು ಮತ್ತು ಕ್ರೀಡಾಂಗಣಗಳನ್ನು ಸ್ಥಾಪಿಸಲಾಗುವುದು ಎಂದು ಮಾನ್ ಹೇಳಿದ್ದಾರೆ.

ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ 117 ವಿಧಾನಸಭಾ ಸ್ಥಾನಗಳಲ್ಲಿ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಭಗವಂತ್ ಮಾನ್ ಅವರು ಧುರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕ ದಲ್ವಿರ್ ಸಿಂಗ್ ಗೋಲ್ಡಿ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಮನ್ ಧುರಿಯಲ್ಲಿ 82,592 ಮತಗಳನ್ನು ಗಳಿಸಿದ್ದಾರೆ, ಕಾಂಗ್ರೆಸ್‌ನ ದಲ್ವಿರ್ ಸಿಂಗ್ ಗೋಲ್ಡಿ (24,386) ಗಿಂತ ಸುಮಾರು 60,000 ಹೆಚ್ಚು. ಇಸಿ ಅಂಕಿಅಂಶಗಳ ಪ್ರಕಾರ ಮಾನ್ 64.29 ಶೇಕಡಾ ಮತಗಳನ್ನು ಗಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com