ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: 2024 ರ ಲೋಕಸಭಾ ಚುನಾವಣೆಯ ದಿಕ್ಸೂಚಿ- ಪ್ರಧಾನಿ ನರೇಂದ್ರ ಮೋದಿ
ಇಂದು ಪ್ರಕಟವಾಗಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published: 10th March 2022 08:38 PM | Last Updated: 10th March 2022 09:02 PM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಇಂದು ಪ್ರಕಟವಾಗಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನೆರೆದಿದ್ದ ಬೃಹತ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಉತ್ತರ ಪ್ರದೇಶದಲ್ಲಿ 2017ರಲ್ಲಿ ಗೆಲುವು ಸಾಧಿಸಿದ್ದರಿಂದ 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಯಿತು ಎಂದು ತಜ್ಞರು ಹೇಳಿದ್ದರು. 2022ರ ಚುನಾವಣೆ 2024ರ ಲೋಕಸಭಾ ಚುನಾವಣೆಯನ್ನು ನಿರ್ಧರಿಸಲಿದೆ ಎಂದು ಅದೇ ತಜ್ಞರು ಹೇಳುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಒಂದೇ ಚುನಾವಣೆಯಲ್ಲಿ 4 ದಾಖಲೆ ಬರೆದ ಯೋಗಿ ಆದಿತ್ಯನಾಥ್
ಪಂಜಾಬಿನಲ್ಲಿಯೂ ಪಕ್ಷ ಬೆಳವಣಿಗೆಯಾಗುತ್ತಿರುವುದನ್ನು ನೋಡುತ್ತಿದ್ದೇನೆ. ಅಲ್ಲಿನ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪಂಜಾಬಿನಲ್ಲಿ ಈ ರೀತಿಯಲ್ಲಿ ಬಿಜೆಪಿಯನ್ನು ಮುಂದಕ್ಕೆ ತಂದಿರುವುದು ಶ್ಲಾಘನೀಯವಾಗಿದೆ. ಮುಂಬರುವ ವರ್ಷಗಳಲ್ಲಿ ಬಿಜೆಪಿ ಬೆಳವಣಿಗೆಯನ್ನು ಅಲ್ಲಿಯೂ ನೋಡುವುದಾಗಿ ಹೇಳಿದರು.
ಪಂಜಾಬಿನಲ್ಲಿ ತಳಮಟ್ಟಕ್ಕೂ ನಮ್ಮ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ತಲುಪಿಸಲಾಗುವುದು. ಬಡವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವವರೆಗೂ ವಿರಾಮಿಸುವುದಿಲ್ಲ ಎಂದು ಮೋದಿ ತಿಳಿಸಿದರು.
ರಷ್ಯಾ- ಉಕ್ರೇನ್ ಯುದ್ಧದ ನಂತರ ನಾವು ಆಮದು ಮಾಡಿಕೊಳ್ಳುತ್ತಿದ್ದ ಸೂರ್ಯಕಾಂತಿ ಅಡುಗೆ ಎಣ್ಣೆ, ಕಲ್ಲಿದ್ದಲು , ಗ್ಯಾಸ್, ರಸಗೊಬ್ಬರ ದರದಲ್ಲಿ ಏರಿಕೆಯಾಗಿದೆ. ಭಾರತ ಶಾಂತಿಯನ್ನು ಬಯಸುತ್ತದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ನರೇಂದ್ರ ಮೋದಿ ಹೇಳಿದರು.
The aftermath of (Ukraine-Russia) war will be borne by every country. India has financial, defence, security, political ties with nations fighting the war...We import oil such as sunflower oil...International prices of coal, gas,fertilizers rising rapidly across the world:PM Modi pic.twitter.com/6VqZvzwAi9
— ANI (@ANI) March 10, 2022