ಮೋರ್ಬಿ ದುರಂತ: ವಂಚನೆ ಕೃತ್ಯ ಎನ್ನಬೇಕೇ? ಉದ್ಧವ್ ಠಾಕ್ರೆ ಬಣ

ಮೊರ್ಬಿ ಸೇತುವೆ ಕುಸಿತದ ಜೀವಹಾನಿ ಜವಾಬ್ದಾರಿಯಿಂದ ಗುಜರಾತ್ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮಂಗಳವಾರ ಹೇಳಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಇದನ್ನು "ವಂಚನೆ, ಪಿತೂರಿ ಕೃತ್ಯ ಅಥವಾಕೇವಲ ಅಪಘಾತ" ಎಂದು ಕರೆಯಬೇಕೇ ಎಂದು ಕೇಳಿದೆ.  
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on

ಮುಂಬೈ:  ಮೊರ್ಬಿ ಸೇತುವೆ ಕುಸಿತದ ಜೀವಹಾನಿ ಜವಾಬ್ದಾರಿಯಿಂದ ಗುಜರಾತ್ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮಂಗಳವಾರ ಹೇಳಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಇದನ್ನು "ವಂಚನೆ, ಪಿತೂರಿ ಕೃತ್ಯ ಅಥವಾಕೇವಲ ಅಪಘಾತ" ಎಂದು ಕರೆಯಬೇಕೇ ಎಂದು ಕೇಳಿದೆ.  

2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ಇದೇ ರೀತಿಯ ಘಟನೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ, ಆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು ಹಾಗಾದರೆ ಇದು ದೇವರ ಕೃತ್ಯ ಎಂದು ಠಾಕ್ರೆ ಶಿಬಿರದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯ ಹೇಳಿದೆ.

ಮೋರ್ಬಿ ತೂಗು ಸೇತುವೆಯ ನವೀಕರಣದ ಗುಣಮಟ್ಟವನ್ನು ಸಾಮ್ನಾ ಪ್ರಶ್ನಿಸಿದೆ, ಅದು ಕುಸಿಯುವ ನಾಲ್ಕು ದಿನಗಳ ಮೊದಲು ಸಾರ್ವಜನಿಕರಿಗೆ ತೆರೆಯಲಾಗಿದೆ.  ಗುಜರಾತ್‌ನ ಮೊರ್ಬಿ ನಗರದ ಮಚ್ಚು ನದಿಯ ತೂಗು ಸೇತುವೆ ಭಾನುವಾರ ಸಂಜೆ ಕುಸಿದು 134 ಜನರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ  ಹಿಂದೆ ತಿಳಿಸಿದರು.

 ಸಾವನ್ನಪ್ಪಿದ ಜೀವಗಳು ಮರಳಿ ಬರುತ್ತವೆಯೇ? ಸೇತುವೆಯ ನಿರ್ವಹಣೆಯ ಹೊಣೆ ಹೊತ್ತಿರುವ ಕಂಪನಿಯನ್ನು ತನಿಖೆ ಮಾಡಬೇಕು, ಆದರೆ ಗುಜರಾತ್ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.

"ಈ ಘಟನೆಯನ್ನು ವಂಚನೆ, ಪಿತೂರಿ ಅಥವಾ ಕೇವಲ ಅಪಘಾತ ಎಂದು ಕರೆಯಬೇಕೇ? ಎಂದು ಅದು ಕೇಳಿದೆ. ಸೇತುವೆ ನವೀಕರಣ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ? ಸೇತುವೆಯು ಹೇಗೆ ಓವರ್‌ಲೋಡ್ ಆಯಿತು (ಜನರೊಂದಿಗೆ) ಹಲವಾರು ಪ್ರಶ್ನೆಗಳಿವೆ. ಸೇತುವೆ ನವೀಕರಣ ಸರಿಯಾಗಿ ಆಗದಿದ್ದರೆ ಸಾರ್ವಜನಿಕರಿಗೆ ಏಕೆ ತೆರೆಯಲಾಯಿತು? ಎಂದು ಮರಾಠಿ ಪ್ರಕಟಣೆ ಕೇಳಿದೆ.

 ತೂಗುಸೇತುವೆಯನ್ನು ನಿರ್ವಹಿಸುತ್ತಿದ್ದ ಒರೆವಾ ಗುಂಪಿನ ನಾಲ್ವರು ಸೇರಿದಂತೆ ಒಂಬತ್ತು ಜನರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಮತ್ತು ಬ್ರಿಟಿಷರ ಕಾಲದ ರಚನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ವಹಿಸಿದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com