ಉಕ್ರೇನ್ ಸಂಘರ್ಷದ ನಡುವೆ ರಷ್ಯಾಗೆ ನವೆಂಬರ್ 7, 8 ರಂದು ಜೈಶಂಕರ್ ಭೇಟಿ

ವಿದೇಶಾಂಗ ಸಚಿವ ಎಸ್ ಜೈಶಂಕರ್ ರಷ್ಯಾಗೆ ಭೇಟಿ ನೀಡಲಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ರಷ್ಯಾಗೆ ಭೇಟಿ ನೀಡಲಿದ್ದಾರೆ. ನಂ.7-8 ರಂದು ಜೈಶಂಕರ್ ರಷ್ಯಾಗೆ ಭೇಟಿ ನೀಡಲಿದ್ದು, ಉಕ್ರೇನ್ ಸಂಘರ್ಷದ ನಡುವೆಯೇ ಈ ಭೇಟಿ ಕುತೂಹಲ ಮೂಡಿಸಿದೆ.
 
ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಜೈಶಂಕರ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೈಶಂಕರ್ ಭೇಟಿಯನ್ನು ವಿದೇಶಾಂಗ ಇಲಾಖೆ ದೃಢಪಟಿಸಿದೆ. ಪಶ್ಚಿಮದ ರಾಷ್ಟ್ರಗಳ ವಿರೋಧದ ನಡುವೆಯೂ ಭಾರತ ರಷ್ಯಾದಿಂದ ಕಳೆದ ಕೆಲವು ತಿಂಗಳುಗಳಲ್ಲಿ ಕಚ್ಚಾ ತೈಲದ ಆಮದನ್ನು ರಿಯಾಯಿತಿ ದರದಲ್ಲಿ ಮಾಡಿಕೊಳ್ಳುತ್ತಿದೆ.
 
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಪ್ರಾರಂಭವಾದಾಗಿನಿಂದ  ಜೈಶಂಕರ್ ಅವರು ರಷ್ಯಾ ವಿದೇಶಾಂಗ  ಸಚಿವರನ್ನು 4 ಬಾರಿ ಭೇಟಿ ಮಾಡಿದ್ದಾರೆ. ಏಪ್ರಿಲ್ ನಲ್ಲಿ ರಷ್ಯಾ ಸಚಿವರೂ ಸಹ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com