ಉದ್ಯೋಗ ಭರವಸೆ ನೀಡುವ ನಕಲಿ ಸಂದೇಶಗಳಿಗೆ ಮೋಸ ಹೋಗಬೇಡಿ: ರಾಷ್ಟ್ರೀಯ ಮಾಹಿತಿ ಕೇಂದ್ರ ಎಚ್ಚರಿಕೆ

ಉದ್ಯೋಗದ ಭರವಸೆ, ಆಮಿಷವೊಡ್ಡುವ ನಕಲಿ ಎಸ್ ಎಂಎಸ್ ಗಳಿಂದ ಸಾರ್ವಜನಿಕರು ದೂರವಿರಬೇಕು, ಮೋಸ ಹೋಗಬಾರದು ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ(NIC) ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಉದ್ಯೋಗದ ಭರವಸೆ, ಆಮಿಷವೊಡ್ಡುವ ನಕಲಿ ಎಸ್ ಎಂಎಸ್ ಗಳಿಂದ ಸಾರ್ವಜನಿಕರು ದೂರವಿರಬೇಕು, ಮೋಸ ಹೋಗಬಾರದು ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ(NIC) ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಉದ್ಯೋಗದ ನಕಲಿ ಸಂದೇಶ ಸಾರ್ವಜನಿಕ ವಲಯದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಈ ಸಲಹೆ, ಎಚ್ಚರಿಕೆಯನ್ನು ನೀಡಿದೆ.

ನಕಲಿ ಸಂದೇಶ ಹಬ್ಬಿರುವುದು ಗಮನಕ್ಕೆ ಬಂದ ಕೂಡಲೇ ಆಂತರಿಕ ತನಿಖೆ ನಡೆಸಿ, ನಕಲಿ ಸಂದೇಶ ಮಾಹಿತಿ ಕೇಂದ್ರದ ಮೂಲಭೂತ ಸೌಕರ್ಯ ವಿಭಾಗದಿಂದ ಬಂದಿದ್ದಲ್ಲ ಎಂದು ದೃಢಪಡಿಸಿದೆ ಎಂದು ಕೇಂಗ್ರ ಸಂವಹನ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com