ಎಎಪಿ ವಿರುದ್ಧ ಎಫ್ ಐಆರ್ ದಾಖಲಿಸಲು ವಂಚಕ ಸುಕೇಶ್ ಒತ್ತಾಯ

ಆಮ್ ಆದ್ಮಿ ಪಕ್ಷದ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ವಂಚಕ ಸುಕೇಶ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ಆಮ್ ಆದ್ಮಿ ಪಕ್ಷದ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ವಂಚಕ ಸುಕೇಶ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಸುಕೇಶ್ ಭ್ರಷ್ಟಾಚಾರ ತಡೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದು ಸದ್ಯ ಜೈಲಿನಲ್ಲಿದ್ದಾನೆ. 

ಎಎಪಿ ಬಗ್ಗೆ ಸತ್ಯ ಹೊರಹಾಕಲು ತುರ್ತಾಗಿ ಸಿಬಿಐ ವಿಚಾರಣೆಗೆ ನಿರ್ದೇಶನ ನೀಡಬೇಕು ಹಾಗೂ ಎಫ್ ಐಆರ್ ದಾಖಲಿಸಲು ನನಗೆ ಅವಕಾಶ ನೀಡಬೇಕು ಎಂದು ದೆಹಲಿ ಲೆಫ್ಟಿನೆಂಟ್ ಗರ್ವನರ್ ಗೆ ಬರೆದಿರುವ ಪತ್ರದಲ್ಲಿ ಚಂದ್ರಶೇಖರ್ ಮನವಿ ಮಾಡಿದ್ದಾನೆ.

ತನ್ನ ಮನವಿ ಮಾಧ್ಯಮಗಳಲ್ಲಿ ಬಿಡುಗಡೆಯಾದ ಬಳಿಕ ಕಳೆದೆರಡು ದಿನಗಳಲ್ಲಿ ತೀವ್ರ ಬೆದರಿಕೆ ಬರುತ್ತಿದೆ. ಎಎಪಿ ಮುಖಂಡರಾದ ಸತ್ಯೇಂದರ್ ಜೈನ್ ಮತ್ತು ಮಾಜಿ ಡಿಜಿ ಸಂದೀಪ್ ಗೋಯೆಲ್ ಅವರ ಪ್ರಭಾವದಿಂದ ಜೈಲಿನಲ್ಲಿ ಬೆದರಿಕೆ ಬರುತ್ತಿರುವುದಾಗಿ ಆತ ಆರೋಪಿಸಿದ್ದಾನೆ.

ದಕ್ಷಿಣ ಭಾರತದಲ್ಲಿ ಪಕ್ಷದ ಉನ್ನತ ಸ್ಥಾನ ಮಾನ ನೀಡುವ ಭರವಸೆ ನೀಡಿದ್ದರಿಂದ ಎಎಪಿಗೆ 50 ಕೋಟಿ ರೂ. ನೀಡಿರುವುದಾಗಿ ಸುಕೇಶ್ ಆರೋಪಿಸಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com