ತೆಲಂಗಾಣ: ಕಾಮರೆಡ್ಡಿಯಿಂದ ರಾಹುಲ್ 'ಭಾರತ್ ಜೋಡೋ ಯಾತ್ರೆ ಆರಂಭ, ಸಂಜೆ ಮಹಾರಾಷ್ಟ್ರಕ್ಕೆ ಪ್ರವೇಶ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೆಲಂಗಾಣದ ಕಾಮರೆಡ್ಡಿಯಿಂದ ಸೋಮವಾರ ಭಾರತ್ ಜೋಡೋ ಯಾತ್ರೆಯನ್ನು ಪುನರ್ ಆರಂಭಿಸಿದರು. ಸಂಜೆ ಹೊತ್ತಿಗೆ ತೆಲಂಗಾಣದಲ್ಲಿ ಯಾತ್ರೆ ಅಂತಿಮಗೊಳ್ಳಲಿದ್ದು, ಮಹಾರಾಷ್ಟ್ರ ತಲುಪಲಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಕಾಮರೆಡ್ಡಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೆಲಂಗಾಣದ ಕಾಮರೆಡ್ಡಿಯಿಂದ ಸೋಮವಾರ ಭಾರತ್ ಜೋಡೋ ಯಾತ್ರೆಯನ್ನು ಪುನರ್ ಆರಂಭಿಸಿದರು. ಸಂಜೆ ಹೊತ್ತಿಗೆ ತೆಲಂಗಾಣದಲ್ಲಿ ಯಾತ್ರೆ ಅಂತಿಮಗೊಳ್ಳಲಿದ್ದು, ಮಹಾರಾಷ್ಟ್ರ ತಲುಪಲಿದೆ. 

ಬೆಳಗ್ಗೆ ಕಾಮರೆಡ್ಡಿ ಜಿಲ್ಲೆಯ ಫತಾಲ್ಪುರ ಬಸ್ ನಿಲ್ದಾಣದಿಂದ ಪಾದಯಾತ್ರೆ ಪುನರ್ ಆರಂಭವಾಗಿದ್ದು, ಶೇಕಾಪುರದಲ್ಲಿ ವಿರಾಮ ಪಡೆಯಲಿದೆ. ಸಂಜೆ 5 ಗಂಟೆಗೆ ಕಾಮರೆಡ್ಡಿಯ ಮೆನೂರ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಪಾಲ್ಗೊಳ್ಳುವ ಸಾಧ್ಯತೆಯಿದೆ. ನಂತರ ಮಹಾರಾಷ್ಟ್ರಕ್ಕೆ ತಲುಪಲಿದೆ.

ಭಾನುವಾರ ಯಾತ್ರೆ 60 ದಿನಗಳನ್ನು ಪೂರ್ಣಗೊಳಿಸಿದೆ. ಈ ಸಂಬಂಧ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಮ್ಮ ಟ್ವೀಟರ್ ಖಾತೆಯೊಂದನ್ನು ಹಂಚಿಕೊಂಡಿದ್ದು, ಭಾರತವನ್ನು ಒಂದುಗೂಡಿಸುವ ಈ ಪ್ರಯಾಣವನ್ನು ಆಚರಿಸಲು ಒಂದು ಪರಿಪೂರ್ಣ ಮೈಲಿಗಲ್ಲು ಎಂದಿದ್ದಾರೆ.

ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿರುವ ರಾಹುಲ್ ಸಂಜೆ ಮಹಾರಾಷ್ಟ್ರದ ನಾಂದೆಡ್ ಜಿಲ್ಲೆಗೆ ಆಗಮಿಸಲಿದ್ದಾರೆ. ಇಲ್ಲಿಯೂ ಯಾತ್ರೆಯನ್ನು ಯಶಸ್ವಿಗೊಳಿಸಲು ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಯಾತ್ರೆಯನ್ನು ಯಶಸ್ವಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

14 ದಿನಗಳ ಮಹಾರಾಷ್ಟ್ರದ ಯಾತ್ರೆಯಲ್ಲಿ 15 ವಿಧಾನಸಭಾ ಕ್ಷೇತ್ರಗಳು, 6 ಲೋಕಸಭಾ ಕ್ಷೇತ್ರಗಳು ಸೇರಿದಂತೆ 381 ಕಿಲೋ ಮೀಟರ್ ದೂರ ರಾಹುಲ್ ನಡೆಯಲಿದ್ದಾರೆ. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ನಾಳೆ ಈ ಯಾತ್ರೆಯನ್ನು ಸೇರಲಿದ್ದಾರೆ. ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಇದರಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com