ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನೇಮಕಾತಿ ಹಗರಣ: CRPF ಕಾನ್‌ಸ್ಟೆಬಲ್, ಎಎಸ್‌ಐ ಬಂಧನ!
ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಸೇರಿದಂತೆ ನಾಲ್ವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 07th November 2022 09:51 PM | Last Updated: 07th November 2022 09:51 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಸೇರಿದಂತೆ ನಾಲ್ವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್, ಕಾನ್‌ಸ್ಟೆಬಲ್ ಸುರೇಂದರ್ ಸಿಂಗ್, ಸಿಆರ್‌ಪಿಎಫ್ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳನ್ನು ಸಿಬಿಐ ಕಸ್ಟಡಿಗೆ ತೆಗೆದುಕೊಂಡಿದೆ. ಪೇಪರ್‌ಗಳು ಪ್ರಿಂಟ್ ಆಗುತ್ತಿದ್ದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪ್ಯಾಕಿಂಗ್ ಇನ್‌ಚಾರ್ಜ್ ಪ್ರದೀಪ್ ಕುಮಾರ್ ಮತ್ತು ಇನ್ನೋರ್ವ ಬಜೀಂದರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ.
ಕೆಲವು ಆಕಾಂಕ್ಷಿಗಳು ಪೇಪರ್‌ಗಳ ಮುಂಗಡ ಪ್ರತಿ ಪಡೆಯಲು 20-30 ಲಕ್ಷ ರೂ. ನೀಡಿದ್ದಾರೆ ಎಂದು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ತಿಳಿಸಿದೆ.
ಜೆಕೆ ಪೊಲೀಸ್‌ನ ಇಬ್ಬರು ಕಾನ್‌ಸ್ಟೆಬಲ್‌ಗಳು, ಒಬ್ಬ ಸಿಆರ್‌ಪಿಎಫ್ ಅಧಿಕಾರಿ, ಸಿಆರ್‌ಪಿಎಫ್‌ನ ಒಬ್ಬ ಮಾಜಿ ಕಾನ್ಸ್‌ಟೇಬಲ್, ಜೆ & ಕೆ ಸರ್ಕಾರದ ಒಬ್ಬ ಶಿಕ್ಷಕ, ಬಿಎಸ್‌ಎಫ್‌ನ ಒಬ್ಬ ಕಮಾಂಡೆಂಟ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಒಬ್ಬ ಎಎಸ್‌ಐ ಸೇರಿದಂತೆ 13 ಆರೋಪಿಗಳನ್ನು ಸಿಬಿಐ ಇದುವರೆಗೆ ಬಂಧಿಸಿದೆ ಎಂದು ಸಂಸ್ಥೆ ತಿಳಿಸಿದೆ.