ದೆಹಲಿ ಮಾಲಿನ್ಯ: ವಾಯು ಗುಣಮಟ್ಟ ಎಕ್ಯುಐ ಮೀಟರ್ ನಲ್ಲಿ 326 ದಾಖಲು, ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಡುವ ಸಾಧ್ಯತೆ

ವಾಯು ಗುಣಮಟ್ಟ ಸೂಚ್ಯಂಕ(AQI) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi air pollution) ಸೋಮವಾರ ಬೆಳಗ್ಗೆ ಕಡಿಮೆಯಾಗಿ ವಾಯುಗುಣಮಟ್ಟ ಕಳಪೆಯಾಗಿದೆ. ಕಳೆದ ವಾರದ ಗಂಭೀರ ಸ್ಥಿತಿಯಿಂದ ಈಗ ಕಳಪೆ ಗುಣಮಟ್ಟಕ್ಕೆ ಬಂದಿದೆ ಎಂದು ಹವಾಮಾನ ವ್ಯವಸ್ಥೆಯನ್ನು ಸೂಚಿಸುವ SAFAR ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಾಯು ಗುಣಮಟ್ಟ ಸೂಚ್ಯಂಕ(AQI) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi air pollution) ಸೋಮವಾರ ಬೆಳಗ್ಗೆ ಕಡಿಮೆಯಾಗಿ ವಾಯುಗುಣಮಟ್ಟ ಕಳಪೆಯಾಗಿದೆ. ಕಳೆದ ವಾರದ ಗಂಭೀರ ಸ್ಥಿತಿಯಿಂದ ಈಗ ಕಳಪೆ ಗುಣಮಟ್ಟಕ್ಕೆ ಬಂದಿದೆ ಎಂದು ಹವಾಮಾನ ವ್ಯವಸ್ಥೆಯನ್ನು ಸೂಚಿಸುವ SAFAR ಹೇಳಿದೆ.

ಗರಿಷ್ಠ ಮಾಲಿನ್ಯ ಮಟ್ಟದಿಂದ ತೀವ್ರ ಕಳಪೆ ಗುಣಮಟ್ಟಕ್ಕೆ ದೆಹಲಿ ಮಾಲಿನ್ಯ ಸ್ಥಿತಿ ಬಂದಿದ್ದು ಒಟ್ಟಾರೆ ನಗರದ ವಾಯು ಗುಣಮಟ್ಟ ಸೂಚ್ಯಂಕ 326ರಲ್ಲಿ ನಿಂತಿದ್ದು ಎಚ್ಚರಿಕೆಯ ಸಂದೇಶ ನೀಡಿದೆ.

ಇನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ(NCR) ನೊಯ್ಡಾದಲ್ಲಿ ಎಕ್ಯುಐ 356ರಲ್ಲಿ ನಿಂತಿದ್ದು ಅದು ಕೂಡ ತೀರಾ ಕಳಪೆ ಮಟ್ಟದ್ದಾಗಿದೆ. ಗುರುಗ್ರಾಮ್ ನಲ್ಲಿ ಎಕ್ಯುಐ 364 ಇದೆ. ಸೊನ್ನೆಯಿಂದ 100ರವರೆಗೆ ವಾಯು ಗುಣಮಟ್ಟ ಸೂಚ್ಯಂಕ ಇದ್ದರೆ ಉತ್ತಮ, 100ರಿಂದ 200 ಇದ್ದರೆ ಸಾಧಾರಣ, 200ರಿಂದ 300 ಇದ್ದರೆ ಕಳಪೆ, 300ರಿಂದ 400 ಇದ್ದರೆ ತೀರಾ ಕಳಪೆ ಮತ್ತು 400ರಿಂದ 500 ಇದ್ದರೆ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿನ ವಾಯು ಗುಣಮಟ್ಟ ಮುನ್ಸೂಚನೆ ವ್ಯವಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ನವೆಂಬರ್ 8 ಮತ್ತು 9ರಂದು ತೀರಾ ಕಳಪೆ ಮಟ್ಟದಲ್ಲಿರಲಿದೆ ಎದು ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ಪ್ರಕಟಣೆ ತಿಳಿಸಿದೆ.

ಆದರೆ ನಿನ್ನೆ ಭಾನುವಾರ ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ಹವಾಮಾನದಲ್ಲಿ ಕೊಂಚ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡವೊಂದು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್(GRAP) 4ನೇ ಹಂತವನ್ನು ಹಿಂಪಡೆದಿದ್ದು, ಟ್ರಕ್ ಗಳಿಗೆ ಮತ್ತು ಬಿಎಸ್ 6 ಹಗುರ ಮೋಟಾರು ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧವಿಲ್ಲ. ಆದರೆ GRAP-3ಅಡಿಯಲ್ಲಿ ಬರುವ ಅಗತ್ಯೇತರ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com