ನೋಟು ಅಮಾನ್ಯೀಕರಣ: ಅಫಿಡವಿಟ್ಟು ಸಲ್ಲಿಸಲು ವಿಫಲವಾದ ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟ್ ಗರಂ

ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದ ಅಧಿಕ ಮೌಲ್ಯದ ನೋಟು ಅಮಾನ್ಯೀಕರಣದ ಹಿಂದಿನ ನಿರ್ಧಾರದ ಪ್ರಕ್ರಿಯೆ ಮತ್ತು ಅದರ ಹಲವು ಆಯಾಮಗಳ ಕುರಿತಂದೆ ಸುಪ್ರೀಂ ಕೋರ್ಟ್ ಮುಂದೆ ಅಫಿಡವಿಟ್ಟು ಸಲ್ಲಿಸುವಲ್ಲಿ ವಿಫಲವಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದ ಅಧಿಕ ಮೌಲ್ಯದ ನೋಟು ಅನಾಣ್ಯೀಕರಣದ ಹಿಂದಿನ ನಿರ್ಧಾರದ ಪ್ರಕ್ರಿಯೆ ಮತ್ತು ಅದರ ಹಲವು ಆಯಾಮಗಳ ಕುರಿತಂದೆ ಸುಪ್ರೀಂ ಕೋರ್ಟ್ ಮುಂದೆ ಅಫಿಡವಿಟ್ಟು ಸಲ್ಲಿಸುವಲ್ಲಿ ವಿಫಲವಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ.

ಕೇಂದ್ರ ಸರ್ಕಾರದ ಪರ ಮನವಿ ಸ್ವೀಕರಿಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವೈ, ಎ ಎಸ್ ಬೋಪಣ್ಣ, ವಿ ರಾಮಾಸುಬ್ರಹ್ಮಣ್ಯನ್ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ನಿನ್ನೆ ವಿಚಾರಣೆ ಸಂದರ್ಭದಲ್ಲಿ, ಸಾಮಾನ್ಯವಾಗಿ ಸಾಂವಿಧಾನಿಕ ಪೀಠ ಈ ರೀತಿ ವಿಚಾರಣೆ ಮುಂದೂಡುವುದಿಲ್ಲ. ಅರ್ಜಿ ವಿಚಾರಣೆ ಆರಂಭವಾದ ನಂತರ ಈ ರೀತಿ ನಾವು ಸಾಮಾನ್ಯವಾಗಿ ಮಾಡುವುದಿಲ್ಲ. ಆದರೆ ಇದು ನ್ಯಾಯಾಲಯಕ್ಕೆ ತುಂಬಾ ಮುಜುಗರದ ವಿಷಯ ಎಂದಿದ್ದಾರೆ.

ಸರ್ಕಾರದ ಪರ ವಾದ ಮಂಡಿಸಿದ ಅಟೋರ್ನಿ ಜನರಲ್ ಆರ್ ವೆಂಕಟರಮಣಿಯವರು ಅಫಿಡವಿಟ್ಟು ಸಲ್ಲಿಸಲು ಇನ್ನಷ್ಟು ಸಮಯಾವಕಾಶ ಬೇಕೆಂದು ಕೋರಿ ತಡವಾಗಿದ್ದಕ್ಕೆ ನ್ಯಾಯಾಲಯ ಮುಂದೆ ಕ್ಷಮೆಯಾಚಿಸಿದರು. ಇದನ್ನು ವಿರೋಢಿಸಿದ ಅಡ್ವೊಕೇಟ್ ಶ್ಯಾಮ್ ದಿವಾನ್, ಕೇಂದ್ರ ಸರ್ಕಾರದ ನೀತಿ ವಿರುದ್ಧ ವಾದ ಮಂಡಿಸಲು ಅವಕಾಶ ನೀಡಬೇಕೆಂದು ಕೋರಿದರು. ಸಾಂವಿಧಾನಿಕ ಪೀಠ ಮುಂದೆ ವಿಚಾರಣೆಯನ್ನು ಮುಂದೂಡುವುದು ಎಂದಿಗೂ ಸರಿಯಾದ ಕ್ರಮವಲ್ಲ ಎಂದರು.

ನಿನ್ನೆ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ ಕೇಂದ್ರ ಸರ್ಕಾರ ಮತ್ತು ಆರ್ ಬಿಐಗೆ ವಾರದೊಳಗೆ ಅಫಿಡವಿಟ್ಟು ಸಲ್ಲಿಸುವಂತೆ ಹೇಳಿದೆ. ಕಳೆದ ತಿಂಗಳು ಅಕ್ಟೋಬರ್ 12ರಂದು ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ, ಸರ್ಕಾರದ ಯೋಜನೆಗಳ ನಿರ್ಧಾರದಲ್ಲಿ ನ್ಯಾಯಾಂಗ ಪರಾಮರ್ಶೆಯ ಲಕ್ಷಣ ರೇಖೆಯ ಬಗ್ಗೆ ಗೊತ್ತಿದೆ. ಆದರೂ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಪರಿಗಣಿಸಲು ಒಪ್ಪಿಕೊಂಡಿದೆ ಎಂದು ಹೇಳಿ ಕೇಂದ್ರ ಸರ್ಕಾರ ಮತ್ತು ಆರ್ ಬಿಐಗೆ ವಿವರವಾಗಿ ಅಫಿಡವಿಟ್ಟು ಸಲ್ಲಿಸುವಂತೆ ಸೂಚಿಸಿತು.

2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಹೊರಡಿಸಿದ್ದ ಅಧಿಸೂಚನೆಯ ಮೌಲ್ಯವನ್ನು ಅರ್ಜಿದಾರರು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಅಂದು ಆರ್ ಬಿಐ ಕಾಯ್ದೆ 1934ರಡಿಯಲ್ಲಿ ಅಧಿಸೂಚನೆ ಹೊರಡಿಸಿದ್ದು ಅದು ಸಂವಿಧಾನ ವಿಧಿ 300 ಎ ಮತ್ತು ಪರಿಚ್ಛೇದ 14,19 ಮತ್ತು 21ರ ಉಲ್ಲಂಘನೆಯಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ.

ನೋಟು ಅಮಾನ್ಯೀಕರಣ ಪ್ರಶ್ನಿಸಿ 58 ಅರ್ಜಿಗಳು ಸುಪ್ರೀಂ ಕೋರ್ಟ್ ಮುಂದೆ ಮಂಡನೆಯಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com