'ಅಲ್ಲಾ-ಹು-ಅಕ್ಬರ್' ಹೇಳುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿ ಮೇಲೆ ಕ್ರೂರವಾಗಿ ಹಲ್ಲೆ, ವಿಡಿಯೋ ವೈರಲ್!

ವಿದ್ಯಾರ್ಥಿಯೋರ್ವನಿಗೆ ಅಲ್ಲಾ-ಹು-ಅಕ್ಬರ್ ಎಂದು ಕೂಗುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ
ವಿದ್ಯಾರ್ಥಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ

ಹೈದರಾಬಾದ್‌: ವಿದ್ಯಾರ್ಥಿಯೋರ್ವನಿಗೆ ಅಲ್ಲಾ-ಹು-ಅಕ್ಬರ್ ಎಂದು ಕೂಗುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಕೆಲವು ಯುವಕರು ಬಲವಂತವಾಗಿ ವಿದ್ಯಾರ್ಥಿಗೆ ಅಲ್ಲಾ-ಹು-ಅಕ್ಬರ್ ಎಂದು ಕರೆಯುವಂತೆ ಒತ್ತಾಯಿಸಿದ್ದು ಆತನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.

ಹೈದರಾಬಾದ್ ಮೂಲದ ಐಸಿಎಫ್‌ಎಐ ಫೌಂಡೇಶನ್‌ನ ವಿದ್ಯಾರ್ಥಿ ಹಿಮಾಂಕ್ ಬನ್ಸಾಲ್ ಅವರನ್ನು ಕೆಲವು ಯುವಕರು ಥಳಿಸಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಲಾಗುತ್ತಿದ್ದು, ಈ ಇಡೀ ವಿಷಯ ಮತ್ತೊಮ್ಮೆ ಧಾರ್ಮಿಕ ಸಹಿಷ್ಣುತೆಯ ಚರ್ಚೆಯನ್ನು ಹುಟ್ಟು ಹಾಕಿದೆ.

ಹಿಮಾಂಕ್​ ಬನ್ಸಾಲ್ ಯುವತಿಯೋರ್ವಳಿಗೆ ಇನ್ಸ್ಟಾಗ್ರಾಮ್​ನಲ್ಲಿ ಅವಮಾನಿಸಿದ್ದಾನೆ. ಅವಳು ಈ ಬಗ್ಗೆ ತನ್ನ ಸ್ನೇಹಿತರಿಗೆ ತಿಳಿಸಿದ್ದಾಳೆ. ಹೀಗಾಗಿ 20 ಜನರ ಗುಂಪು ಬಂದು ಅವನ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಹಲ್ಲೆಕೋರರ ಪೈಕಿ ಈಗಾಗಲೇ 10 ಮಂದಿಯನ್ನು ಗುರುತಿಸಲಾಗಿದ್ದು ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 342, 450, 323 ಮತ್ತು 506 (ಬೆದರಿಕೆ), ಸೆಕ್ಷನ್ 149 ಮತ್ತು ಸೆಕ್ಷನ್ 4(I), (II), ಮತ್ತು (III) ರ್ಯಾಗಿಂಗ್ ನಿಷೇಧ ಕಾಯಿದೆ 2011ರ ಅಡಿಯಲ್ಲಿ ದೂರು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com