ರಾಷ್ಟ್ರಪತಿ ಮುರ್ಮು ವಿರುದ್ಧ ಟಿಎಂಸಿ ಸಚಿವ ಅಖಿಲ್ ಗಿರಿ ಆಕ್ಷೇಪಾರ್ಹ ಹೇಳಿಕೆ, ಬಿಜೆಪಿ ಖಂಡನೆ

ಪಶ್ಚಿಮ ಬಂಗಾಳ ಸಚಿವ ಮತ್ತು ಟಿಎಂಸಿ ಮುಖಂಡ ಅಖಿಲ್ ಗಿರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ರಾಜಕೀಯ ಯಾವ ಮಟ್ಟಕ್ಕೆ ಕೆಳ ಹಂತಕ್ಕೆ ತಲುಪಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಟಿಎಂಸಿ ಸಚಿವ ಅಖಿಲ್ ಗಿರಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಟಿಎಂಸಿ ಸಚಿವ ಅಖಿಲ್ ಗಿರಿ

ನಂದಿಗ್ರಾಮ: ಪಶ್ಚಿಮ ಬಂಗಾಳ ಸಚಿವ ಮತ್ತು ಟಿಎಂಸಿ ಮುಖಂಡ ಅಖಿಲ್ ಗಿರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ರಾಜಕೀಯ ಯಾವ ಮಟ್ಟಕ್ಕೆ ಕೆಳ ಹಂತಕ್ಕೆ ತಲುಪಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಸುವೇದು ಅಧಿಕಾರಿ ನಾನು ನೋಡಲು ಚೆನ್ನಾಗಿಲ್ಲ ಎಂದು ಹೇಳುತ್ತಾರೆ. ನೀವು ತುಂಬಾ ಸುಂದರವಾಗಿದ್ದೀರಿ! ನೋಟದಿಂದ ಮಾತ್ರ ನಾವು ಯಾರನ್ನೂ ತೀರ್ಮಾನಿಸಲು ಸಾಧ್ಯವಿಲ್ಲ. ನಾವು ರಾಷ್ಟ್ರಪತಿ ಕಚೇರಿಗೆ ಗೌರವ ನೀಡುತ್ತೇವೆ. ಆದರೆ, ನಮ್ಮ ರಾಷ್ಟ್ರಪತಿ ಹೇಗೆ ಕಾಣಿಸುತ್ತಾರೆ? ಎಂದು ಕೇಳಿದ್ದಾರೆ.

ಬಂಗಾಳ ಸಚಿವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಆಕೆಯ ಪಕ್ಷ ಬುಡಕಟ್ಟು ವಿರೋಧಿ ಎಂದು ಟೀಕಿಸಿದೆ. ದ್ರೌಪದಿ ಮುರ್ಮು  ಬುಡಕಟ್ಟು ಸಮುದಾಯದಿಂದ ಬಂದಿದ್ದು, ಅವರ ನೋಟದ ಬಗ್ಗೆ ಟಿಎಂಸಿ ಸಚಿವ ಅಖಿಲ್ ಗಿರಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಮತಾ ಬ್ಯಾನರ್ಜಿಹಾಗೂ ಅವರ ಪಕ್ಷ ಆದಿವಾಸಿ ವಿರೋಧಿಯಾಗಿದೆ ಎಂದು ಬಂಗಾಳ ಬಿಜೆಪಿ ಘಟಕ ಗಿರಿ ವಿಡಿಯೋದೊಂದಿಗೆ  ಟ್ವೀಟ್ ಮಾಡಿದೆ.

ಜುಲೈನಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ಅವರನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com