ನ.18 ರಿಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಂಪುಟ ಸಹೋದ್ಯೋಗಿಗಳ ವಿದೇಶ ಪ್ರವಾಸ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ನ.18 ರಿಂದ ವಿದೇಶ ಪ್ರವಾಸ ಕೈಗೊಳ್ಳಲು ಸಿದ್ಧರಾಗಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ನ.18 ರಿಂದ ವಿದೇಶ ಪ್ರವಾಸ ಕೈಗೊಳ್ಳಲು ಸಿದ್ಧರಾಗಿದ್ದಾರೆ.

ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ಹೂಡಿಕೆದಾರರನ್ನು ಆಕರ್ಷಿಸುವ ಮುಖ್ಯ ಉದ್ದೇಶವನ್ನು ಈ ವಿದೇಶ ಪ್ರವಾಸ ಹೊಂದಿದ್ದು, 20 ದೇಶಗಳ 26 ನಗರಗಳಲ್ಲಿ ಉತ್ತರ ಪ್ರದೇಶ ಸಿಎಂ ತಂಡದ ಸದಸ್ಯರು ರೋಡ್ ಶೋ ನಡೆಸಲಿದ್ದಾರೆ. ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶಂಗಸಭೆ 2023 ರ ಫೆ.10-12 ವರೆಗೆ ನಡೆಯಲಿದೆ.

ರಾಜ್ಯ ಸರ್ಕಾರ 10 ಲಕ್ಷ ಕೋಟಿ ರೂಪಾಯಿ ಮೊತ್ತದ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದು, ಮೂಲಗಳ ಪ್ರಕಾರ, ಸಿಎಂ, ಸಚಿವರುಗಳ ವಿದೇಶ ಪ್ರವಾಸ ಡಿಸೆಂಬರ್ ಮೂರನೇ ವಾರದವರೆಗೂ ನಡೆಯಲಿದೆ.

ಇದನ್ನೂ ಓದಿ: ಈ ಊರಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥರಿಗೆ ದೇವಾಲಯ, ದಿನವೂ ನಡೆಯಲಿದೆ ಪೂಜೆ, ಮಂಗಳಾರತಿ!
 
 
ಅಮೇರಿಕಾಗೆ 10 ಮಂದಿ ಸಚಿವರ ನಿಯೋಗ ಭೇಟಿ ನೀಡಲಿದ್ದು, ನ್ಯೂಯಾರ್ಕ್, ಡಲ್ಲಾಸ್, ಚಿಕಾಗೋ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲೀಸ್ ಗಳಿಗೆ ತೆರಳಲಿವೆ. ಬ್ರಿಟನ್ ನಲ್ಲಿ ಲಂಡನ್, ಯುಎಇ ನಲ್ಲಿ ದುಬೈ ಹಾಗೂ ಅಬು ಧಾಬಿ, ನೆದರ್ಲ್ಯಾಂಡ್ ನಲ್ಲಿ ಐಂಡ್ಹೋವನ್, ಫ್ರಾನ್ಸ್ ನಲ್ಲಿ ಪ್ಯಾರಿಸ್ ಗಳಿಗೆ ಸಚಿವರ ತಂಡ ಭೇಟಿ ನೀಡಲಿದೆ.

ಸಚಿವರ ನಿಯೋಗ ಕೆನಡಾದ ಟೊರೊಂಟೊ, ಮಾಂಟ್ರಿಯಲ್ ಮತ್ತು ವ್ಯಾಂಕೋವರ್, ಬ್ರೆಜಿಲ್‌ನ ರಿಯೊ ಡಿ ಜನೈರೊ, ಮೆಕ್ಸಿಕೊದ ಮೆಕ್ಸಿಕೊ ನಗರ, ಅರ್ಜೆಂಟೀನಾದ ಬ್ಯೂನಸ್ ಐರಿಸ್, ಜರ್ಮನಿಯ ಮ್ಯೂನಿಚ್ ಮತ್ತು ಬೆಲ್ಜಿಯಂನ ಬ್ರಸೆಲ್ಸ್‌ಗೆ ತಮ್ಮ ಪ್ರವಾಸವನ್ನು ಮುಂದುವರಿಸುತ್ತವೆ.

ಸಿಎಂ ಯೋಗಿ ಆದಿತ್ಯನಾಥ್ ಲಂಡನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಗುಜರಾತ್ ನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯೋಗಿ ಆದಿತ್ಯನಾಥ್ ಅವರ ವಿದೇಶ ಪ್ರವಾಸ ಕಾರ್ಯಕ್ರಮ ಅಂತಿಮಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com