ಮಾಲೀಕರ ಗಮನಕ್ಕೆ: ನಾಯಿ ಕಚ್ಚಿದರೆ ಚಿಕಿತ್ಸೆಗೆ ಅದರ ಮಾಲೀಕರು 10,000 ತೆರಬೇಕು!
ನಾಯಿ ಮಾಲೀಕರೇ ಎಚ್ಚರ.. ನಿಮ್ಮ ಸಾಕು ಶ್ವಾನ ಇತರರನ್ನು ಕಚ್ಚಿದರೆ ಅವರ ಚಿಕಿತ್ಸೆಗೆ ನೀವೇ 10,000 ತೆರಬೇಕು.. ಇಂತಹುದು ಕಾನೂನು ಇದೀಗ ಜಾರಿಗೆ ಬಂದಿದೆ.
Published: 13th November 2022 03:07 PM | Last Updated: 13th November 2022 03:07 PM | A+A A-

ನಾಯಿಗಳಿಗೆ ಕಬ್ಬನ್ ಪಾರ್ಕ್ ಪ್ರವೇಶ ನಿಷೇಧ
ನೋಯ್ಡಾ: ನಾಯಿ ಮಾಲೀಕರೇ ಎಚ್ಚರ.. ನಿಮ್ಮ ಸಾಕು ಶ್ವಾನ ಇತರರನ್ನು ಕಚ್ಚಿದರೆ ಅವರ ಚಿಕಿತ್ಸೆಗೆ ನೀವೇ 10,000 ತೆರಬೇಕು.. ಇಂತಹುದು ಕಾನೂನು ಇದೀಗ ಜಾರಿಗೆ ಬಂದಿದೆ.
ಹೌದು. ನಾಯಿ ಕಚ್ಚಿದರೆ ಸಂತ್ರಸ್ತರ ಚಿಕಿತ್ಸೆಗೆ ನಾಯಿ ಮಾಲೀಕರು 10 ಸಾವಿರ ರೂ. ನೀಡಬೇಕು ಎಂದು ನೋಯ್ಡಾದಲ್ಲಿ ಆದೇಶಿಸಲಾಗಿದೆ. ಮಾರ್ಚ್ 1, 2023ರಿಂದ ಅನ್ವಯ ಆಗುವಂತೆ ನೋಯ್ಡಾ ಪ್ರಾಧಿಕಾರ ಈ ಆದೇಶ ಹೊರಡಿಸಿದ್ದು, ನಗರದಲ್ಲಿ ನಾಯಿ ದಾಳಿ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ನೋಯ್ಡಾ ಪ್ರಾಧಿಕಾರ ಈ ಆದೇಶ ಹೊರಡಿಸಿದೆ. ಶನಿವಾರ ನಡೆದ ನೋಯ್ಡಾ ಪ್ರಾಧಿಕಾರ ಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಅಂತೆಯೇ ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿ ಅಥವಾ ಬೆಕ್ಕುಗಳನ್ನು ಮುಂದಿನ ವರ್ಷದ ಜನವರಿ 31ರೊಳಗೆ ನೋಂದಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ನಾಗ್ಪುರದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿದ ಪ್ರಾಣಿ ಕಾರ್ಯಕರ್ತನಿಗೆ ಥಳಿತ, ಎರಡೂ ಕಿವಿಗೆ ಹಾನಿ
ಇದಲ್ಲದೆ ಸಾಕು ನಾಯಿ ಅಥವಾ ಬೆಕ್ಕುಗಳಿಂದ ಇತರರಿಗೆ ಯಾವುದೇ ರೀತಿಯ ತೊಂದರೆಯುಂಟಾದರೆ 10 ಸಾವಿರ ರೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ. ಭಾರತದ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನಗರದಲ್ಲಿ ನಾಯಿ ಕಚ್ಚುವಿಕೆಯ ಹಲವಾರು ನಿದರ್ಶನಗಳಿರುವ ಹಿನ್ನೆಲೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಹಾಗೂ ಬೀದಿ ಬದಿಯಲ್ಲಿ ಆಹಾರ ನೀಡುವುದನ್ನು ನೀತಿಯನ್ನು ಪ್ರಾಧಿಕಾರ ಅನುಮೋದಿಸಿದೆ. ಪ್ರಾಧಿಕಾರದ ಹೊಸ ನೀತಿಯ ಪ್ರಕಾರ ಸಾಕು ನಾಯಿಗಳು ಅಥವಾ ಬೆಕ್ಕುಗಳ ನೋಂದಣಿಯು ಜನವರಿ 31, 2023ರವರೆಗೆ ಇರಲಿದ್ದು, ನೋಂದಣಿಯಾಗದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಸಾಕು ನಾಯಿಗಳಿಗೆ ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ.
ಇದನ್ನೂ ಓದಿ: ಬೆಂಗಳೂರು: ಹಿಂಸಾಚಾರಕ್ಕೆ ತಿರುಗಿದ ಬಾರ್ ಜಗಳ, ಯುವಕನ ತುಂಡರಿಸಿದ ಮುಷ್ಟಿಯನ್ನು ಎತ್ತೊಯ್ದ ಬೀದಿ ನಾಯಿ
ಬೀದಿ ನಾಯಿಗಳಿಗೆ ಶ್ವಾನಧಾಮವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕ ಜಾಗದಲ್ಲಿ ನಾಯಿಯು ಗಲೀಜು ಮಾಡಿದರೆ ಅದರ ಹೊಣೆಯನ್ನು ಮಾಲೀಕ ಹೊರಬೇಕಾಗುತ್ತದೆ. ಹಾಗೇಯೇ ಅವರೇ ಅದನ್ನು ಸ್ವಚ್ಛಗೊಳಿಸಬೇಕು, ಹಾಗೂ ಒಂದೊಮ್ಮೆ ಸಾಕು ನಾಯಿ ಯಾರಿಗಾದರೂ ಕಚ್ಚಿದರೆ ರೋಗಿಯ ಚಿಕಿತ್ಸೆಯನ್ನು ಕೂಡ ಮಾಲೀಕನೇ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಗಿದೆ.