ಎಂದಿಗೂ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಪ್ರಶಾಂತ್ ಕಿಶೋರ್

ರಾಜಕೀಯ ತಂತ್ರಜ್ಞ-ರಾಜಕಾರಣಿಯಾಗಿ ಬದಲಾಗಿರುವ ಪ್ರಶಾಂತ್ ಕಿಶೋರ್ ಶನಿವಾರ ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಳ್ಳಿಹಾಕಿದರು. ಆದರೆ ತಮ್ಮ ತವರು ರಾಜ್ಯ ಬಿಹಾರಕ್ಕೆ 'ಉತ್ತಮ ಪರ್ಯಾಯ ಆಯ್ಕೆ' ನೀಡುವ ಭರವಸೆಯನ್ನು ಪುನರುಚ್ಚರಿಸಿದರು.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಬೆಟ್ಟಿಯಾ(ಬಿಹಾರ): ರಾಜಕೀಯ ತಂತ್ರಜ್ಞ-ರಾಜಕಾರಣಿಯಾಗಿ ಬದಲಾಗಿರುವ ಪ್ರಶಾಂತ್ ಕಿಶೋರ್ ಶನಿವಾರ ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಳ್ಳಿಹಾಕಿದರು. ಆದರೆ ತಮ್ಮ ತವರು ರಾಜ್ಯ ಬಿಹಾರಕ್ಕೆ 'ಉತ್ತಮ ಪರ್ಯಾಯ ಆಯ್ಕೆ' ನೀಡುವ ಭರವಸೆಯನ್ನು ಪುನರುಚ್ಚರಿಸಿದರು. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐ-ಪಿಎಸಿ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಜೆಡಿಯು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಾಸ್ತವವಾಗಿ, ಪ್ರಶಾಂತ್ ಕಿಶೋರ್ ಸ್ವಲ್ಪ ರಾಜಕೀಯ ಚಾಣಾಕ್ಷತನವನ್ನು ಹೊಂದಿರುವ 'ದಂದೆಬಾಜ್'(ವ್ಯಾಪಾರಿ) ಎಂದು ಆರೋಪಿಸಿ ಜೆಡಿಯು ನಾಯಕರ ವಿರುದ್ಧ ಪಿಕೆ ಸಾಕಷ್ಟು ಅಸಮಾಧಾನಗೊಂಡಿದ್ದು ಅಲ್ಲದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನನ್ನನ್ನು ಎರಡು ವರ್ಷಗಳ ಕಾಲ ತಮ್ಮ ನಿವಾಸದಲ್ಲಿ ಏಕೆ ಇಟ್ಟುಕೊಂಡಿದ್ದರು ಎಂದು ಜೆಡಿಯು ನಾಯಕರಿಗೆ ಸವಾಲು ಹಾಕಿದರು.

ಪ್ರಶಾಂತ್ ಕಿಶೋರ್ ಅವರಿಗೆ ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಪದೇ ಪದೇ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ನಾನೇಕೆ ಚುನಾವಣೆಗೆ ಸ್ಪರ್ಧಿಸುತ್ತೇನೆ? ನನಗೆ ಅಂತಹ ಆಕಾಂಕ್ಷೆ ಇಲ್ಲ ಎಂದರು. 

'ಜನ ಸೂರಜ್' ಅಭಿಯಾನವನ್ನು ರಾಜಕೀಯ ಪಕ್ಷವನ್ನಾಗಿ ಮಾಡಬೇಕೇ ಎಂಬ ಬಗ್ಗೆ ಈ ಸಮಾವೇಶದಲ್ಲಿ ಜನರ ಅಭಿಪ್ರಾಯ ತೆಗೆದುಕೊಳ್ಳಲಾಗುವುದು. ರಾಜ್ಯದ 3,500 ಕಿ.ಮೀ ಉದ್ದದ 'ಪಾದಯಾತ್ರೆ'ಗೆ ಆಗಮಿಸಿದ ಕಿಶೋರ್, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇದೇ ರೀತಿಯ ಅಭಿಪ್ರಾಯ ಸಂಗ್ರಹಣೆ ನಡೆಯಲಿದ್ದು, ಅದರ ಆಧಾರದ ಮೇಲೆ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.

ನಿತೀಶ್ ಕುಮಾರ್ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿದ್ದಕ್ಕಾಗಿ ವಿಷಾದವಿಲ್ಲ. ನಿತೀಶ್ ಕುಮಾರ್ 10 ವರ್ಷಗಳ ಹಿಂದೆ ಇದ್ದದ್ದಕ್ಕೂ ಈಗ ಅವರು ಆಗಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು 2014ರಲ್ಲಿ ಕುರ್ಚಿ ತೊರೆದಿದ್ದರು. ಆದರೆ ಈಗ ಅಧಿಕಾರದಲ್ಲಿ ಉಳಿಯಲು ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ ಎಂದರು.

ಮಹಾಘಟಬಂಧನ್ ಸರ್ಕಾರದ ವಾರ್ಷಿಕ 10 ಲಕ್ಷ ಉದ್ಯೋಗಗಳ ಭರವಸೆಯನ್ನು ಲೇವಡಿ ಮಾಡಿದ ಕಿಶೋರ್, 'ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ, ಮತ್ತೊಮ್ಮೆ ಹೇಳುತ್ತೇನೆ. ಅವರು ಭರವಸೆಯನ್ನು ಪೂರೈಸಿದರೆ, ನಾನು ನನ್ನ ಅಭಿಯಾನವನ್ನು ತ್ಯಜಿಸುತ್ತೇನೆ' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com