ಪೊಲೀಸರಿಂದ ನಕಲಿ ಕೇಸ್ ದಾಖಲು: ಶಾಸಕ ಸ್ಥಾನ ತೊರೆಯಲು ಎನ್ ಸಿಪಿಯ ಜೀತೇಂದ್ರ ಅವ್ಹಾದ್ ನಿರ್ಧಾರ

ಎನ್ ಸಿಪಿ ಶಾಸಕ ಮತ್ತು ಮಾಜಿ ಮಹಾರಾಷ್ಟ್ರ ಸಚಿವ ಜೀತೇಂದ್ರ ಅವ್ಹಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಸೋಮವಾರ ತಿಳಿಸಿದ್ದಾರೆ. ತನ್ನ ವಿರುದ್ಧ ಪೊಲೀಸರು ನಕಲಿ ಕೇಸ್ ದಾಖಲಿಸಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಎನ್ ಸಿಪಿ ಶಾಸಕ ಅವ್ಹಾದ್
ಎನ್ ಸಿಪಿ ಶಾಸಕ ಅವ್ಹಾದ್

ಮುಂಬೈ: ಎನ್ ಸಿಪಿ ಶಾಸಕ ಮತ್ತು ಮಾಜಿ ಮಹಾರಾಷ್ಟ್ರ ಸಚಿವ ಜೀತೇಂದ್ರ ಅವ್ಹಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಸೋಮವಾರ ತಿಳಿಸಿದ್ದಾರೆ. ತನ್ನ ವಿರುದ್ಧ ಪೊಲೀಸರು ನಕಲಿ ಕೇಸ್ ದಾಖಲಿಸಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

 ಮಹಿಳೆಯರೊಬ್ಬರ ದೂರಿನ ಆಧಾರದ ಮೇಲೆ ನೆರೆಯ  ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಸೋಮವಾರ ಮಧ್ಯರಾತ್ರಿ ಅವ್ಹಾದ್ ವಿರುದ್ಧ ಐಪಿಸಿ ಸೆಕ್ಷನ್ 354( ಮಹಿಳೆ ಮೇಲೆ ಹಲ್ಲೆ, ಕ್ರಿಮಿನಲ್ ಸಂಚು) ಕೇಸ್ ದಾಖಲಿಸಿದ್ದಾರೆ. ಭಾನುವಾರ ಸಂಜೆ ಮುಂಬ್ರಾದಲ್ಲಿ ಮುಖ್ಯಮಂತ್ರಿಯ ಕಾರ್ಯಕ್ರಮ ಮುಗಿದ ನಂತರ ಜಗರ ಗುಂಪನ್ನು ಚದುರಿಸುವಾಗ ಎನ್ ಸಿಪಿ ಶಾಸಕ ಆಕೆಯನ್ನು ತಳ್ಳಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. 

ಥಾಣೆ ನಗರದ ಮಾಲ್ ವೊಂದರಲ್ಲಿ ಹರ್ ಹರ್ ಮಹಾದೇವ್ ಶೋ ವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅವ್ಹಾದ್ ಮತ್ತು ಆತನ ಬೆಂಬಲಿಗರನ್ನು ಶುಕ್ರವಾರ ಬಂಧಿಸಲಾಗಿತ್ತು. ನಂತರ ಶನಿವಾರ ಕೋರ್ಟ್ ಜಾಮೀನಿನ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು.

ತನ್ನ ವಿರುದ್ಧ ಐಪಿಸಿ ಸೆಕ್ಷನ್ 354 ಸೇರಿದಂತೆ ಎರಡು ನಕಲಿ ದೂರು ದಾಖಲಾಗಿರುವುದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಇಂತಹ ಪೊಲೀಸ್ ದೌರ್ಜನ್ಯದ ವಿರುದ್ಧ ಹೋರಾಡುತ್ತೇನೆ. ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿರುವುದನ್ನು ನನ್ನ ಕಣ್ಣುಗಳಿಂದ ನೋಡಲು ಆಗುತ್ತಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com