ಯಂಗ್ ಇಂಡಿಯಾ ಟ್ರಸ್ಟ್ ಗೆ ದೇಣಿಗೆ: ಇಡಿ ವಿಚಾರಣೆಗೆ ಡಿಕೆ ಶಿವಕುಮಾರ್ ಹಾಜರು; ಮುಚ್ಚಿಡುವಂತಹದೇನೂ ಇಲ್ಲ ಎಂದ ಕೆಪಿಸಿಸಿ ಅಧ್ಯಕ್ಷ

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊರತರುವ ಯಂಗ್ ಇಂಡಿಯಾ ಟ್ರಸ್ಟ್‌ಗೆ ದೇಣಿಗೆ ಸಂಬಂಧ ಮುಚ್ಚಿಡುವಂತಹದೇನೂ ಇಲ್ಲ, ಎಲ್ಲ ವಿವರವನ್ನು ಇಡಿಗೆ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊರತರುವ ಯಂಗ್ ಇಂಡಿಯಾ ಟ್ರಸ್ಟ್‌ಗೆ ದೇಣಿಗೆ ಸಂಬಂಧ ಮುಚ್ಚಿಡುವಂತಹದೇನೂ ಇಲ್ಲ, ಎಲ್ಲ ವಿವರವನ್ನು ಇಡಿಗೆ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಡಿ  ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಂಗ್ ಇಂಡಿಯಾ ಟ್ರಸ್ಟ್‌ಗೆ  ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸಮನ್ಸ್ ನೀಡಲಾಗಿದೆ. ಕೆಲ ದಾಖಲೆಗಳನ್ನು ಅವರಿಗೆ ಕಳುಹಿಸಿದ್ದೇನೆ. ಆದಾಗ್ಯೂ, ಅವರಿಗೆ ತೃಪ್ತಿ ಆಗಿಲ್ಲಅನ್ನಿಸುತ್ತದೆ. ಹಾಗಾಗೀ ಮತ್ತೊಂದು ಸಮನ್ಸ್ ನೀಡಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲಯ ಇಂದು ಮತ್ತೆ ಅವರು ವಿಚಾರಣೆಗೆ ಕರೆದಿರುವುದಾಗಿ ತಿಳಿಸಿದರು.

ಈ ವಿಚಾರದಲ್ಲಿ ಮುಚ್ಚಿಡುವಂತಹದೇನೂ ಇಲ್ಲ. ಚಾರಿಟೇಬಲ್ ಕೆಲಸಕ್ಕಾಗಿ ದೇಣಿಗೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನನೊಬ್ಬನೇ ಅಲ್ಲ, ಯಂಗ್ ಇಂಡಿಯಾ ಯಶಸ್ಸು ಬಯಸುವ ಅನೇಕ ಮಂದಿ ಇದ್ದಾರೆ. ಮೂರು ವಾರಗಳ ಕಾಲ ಸಮಯಾವಕಾಶ ಕೇಳಿದ್ದೆ. ಇಂದು ವಿಚಾರಣೆಗೆ ಹಾಜರಾಗಲು ಹೇಳಿದ್ದರಿಂದ ಉಜ್ಜೈನಿಯ ಮಹಾಕಾಳೇಶ್ವರದಿಂದ ನೇರವಾಗಿ ದೆಹಲಿಗೆ ಬಂದಿದ್ದೇನೆ. ಸಮನ್ಸ್ ಮತ್ತು ಇಡಿ ಸಂಸ್ಥೆಯನ್ನು ನಾವು ಗೌರವಿಸಬೇಕು. ಎಲ್ಲಾ ವಿಚಾರಗಳನ್ನು ಅವರಿಗೆ ತಿಳಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com