ಭಾರತ್ ಜೋಡೋ ಯಾತ್ರೆ, ಯಾವುದೇ ವೋಟ್ ಬ್ಯಾಂಕ್ ನೊಂದಿಗೆ ಸಂಬಂಧಿಸಿದ್ದಲ್ಲ: ಜೈರಾಮ್ ರಮೇಶ್

ಭಾರತ್ ಜೋಡೋ ಯಾತ್ರೆ ಯಾವುದೇ ವೋಟ್ ಬ್ಯಾಂಕ್ ನೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.
ಜೈರಾಮ್ ರಮೇಶ್
ಜೈರಾಮ್ ರಮೇಶ್

ಮುಂಬೈ: ಭಾರತ್ ಜೋಡೋ ಯಾತ್ರೆ ಯಾವುದೇ ವೋಟ್ ಬ್ಯಾಂಕ್ ನೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯ ಉದ್ದೇಶಗಳು ರಾಜಕೀಯಕ್ಕೂ ಮೇಲ್ಪಟ್ಟದಾಗಿವೆ. ಇದು ರಾಜಕೀಯ ಪಕ್ಷ ಮತ್ತು ರಾಜಕೀಯ ವಿಷಯವನ್ನೊಳಗೊಂಡ ಯಾತ್ರೆಯಾಗಿದೆ. ಆದರೆ, ಇದು ವೋಟ್ ಬ್ಯಾಂಕ್ ನೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದರು.

ಒಗ್ಗಟ್ಟನ್ನು ಈ ಯಾತ್ರೆ ಪ್ರಚೋದಿಸುತ್ತದೆ. ಇದು ನಮ್ಮ ಪಕ್ಷಕ್ಕೆ ಸಂಪರ್ಕ ಹೊಂದಿದೆ. ಇದರ ಪರಿಣಾಮ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರದರ್ಶನವಾಗಲಿದೆ ಎಂದು ಜೈರಾಮ್ ರಮೇಶ್ ತಿಳಿಸಿದರು. 

ಮಹಾರಾಷ್ಟ್ರದಲ್ಲಿಯೂ ಭಾರತ್ ಜೋಡೋ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಹಿಂಗೋಲಿ ಜಿಲ್ಲೆಯ ಪಾಲೆಗಾಂವ್ ನಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಇಂದು ಆರಂಭವಾಯಿತು. ಪಕ್ಷದ ಮುಖಂಡರು, ಅಭಿಮಾನಿಗಳು ಸೇರಿದಂತೆ ಸಹಸ್ರಾರು ಮಂದಿಯೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com