ಮೈನ್‌ಪುರಿಯಿಂದ ಎಸ್‌ಪಿಯ ಡಿಂಪಲ್ ಯಾದವ್ ವಿರುದ್ಧ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ ಕಣಕ್ಕೆ
ಸಮಾಜವಾದಿ ಪಕ್ಷದ (ಎಸ್‌ಪಿ) ಡಿಂಪಲ್ ಯಾದವ್ ವಿರುದ್ಧ ಮೈನ್‌ಪುರಿ ಲೋಕಸಭಾ ಉಪಚುನಾವಣೆಗೆ ಬಿಜೆಪಿಯ ಮಾಜಿ ಸಂಸದ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು ಅಭ್ಯರ್ಥಿಯನ್ನಾಗಿ ಮಂಗಳವಾರ ಕಣಕ್ಕಿಳಿಸಿದೆ.
Published: 15th November 2022 01:03 PM | Last Updated: 15th November 2022 01:35 PM | A+A A-

ಬಿಜೆಪಿ ಲೋಗೋ
ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಡಿಂಪಲ್ ಯಾದವ್ ವಿರುದ್ಧ ಮೈನ್‌ಪುರಿ ಲೋಕಸಭಾ ಉಪಚುನಾವಣೆಗೆ ಬಿಜೆಪಿಯ ಮಾಜಿ ಸಂಸದ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು ಅಭ್ಯರ್ಥಿಯನ್ನಾಗಿ ಮಂಗಳವಾರ ಕಣಕ್ಕಿಳಿಸಿದೆ.
ಶಾಕ್ಯಾ ಅವರು ಒಂದು ಕಾಲದಲ್ಲಿ ಶಿವಪಾಲ್ ಯಾದವ್ ಅವರ ನಿಕಟ ಸಹವರ್ತಿಯಾಗಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಇದಕ್ಕೂ ಮೊದಲು ಅವರು ಸಮಾಜವಾದಿ ಪಕ್ಷ (ಎಸ್‌ಪಿ) ಯಲ್ಲಿದ್ದರು ಮತ್ತು ಶಿವಪಾಲ್ ಅವರು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ ನಂತರ ಅವರ ಪರವಾಗಿ ನಿಂತರು.
ಎಸ್‌ಪಿಯ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದಾಗಿ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಸಮಾಜವಾದಿ ಪಕ್ಷದಿಂದ ಡಿಂಪಲ್ ಯಾದವ್ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ಯುಪಿ ಉಪಚುನಾವಣೆ: ಮೈನ್‌ಪುರಿಯಿಂದ ಎಸ್‌ಪಿ ಅಭ್ಯರ್ಥಿಯಾಗಿ ಡಿಂಪಲ್ ಯಾದವ್ ಕಣಕ್ಕೆ
ಬಿಜೆಪಿ ಇತ್ತೀಚೆಗೆ ಎಸ್‌ಪಿಯ ಭದ್ರಕೋಟೆಗಳು ಎನಿಸಿದ್ದ ಅಜಂಗಢ ಮತ್ತು ರಾಂಪುರ ಲೋಕಸಭಾ ಕ್ಷೇತ್ರಗಳನ್ನು ಯಶಸ್ವಿಯಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಮೈನ್‌ಪುರಿಯಲ್ಲಿಯೂ ಅದೇ ರೀತಿ ಮಾಡಲು ಯತ್ನಿಸುತ್ತಿದೆ. ಶಿವಪಾಲ್ ಯಾದವ್ ಅವರ ಸೋದರಳಿಯ ಮತ್ತು ಎಸ್‌ಪಿ ಅಧ್ಯಕ್ಷರಾಗಿರುವ ಅಖಿಲೇಶ್ ಯಾದವ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಯಾದವ್ ಕುಟುಂಬದಲ್ಲಿನ ಒಡಕುಗಳು ಬಿಜೆಪಿಯ ಭರವಸೆಯನ್ನು ಹೆಚ್ಚಿಸಿವೆ.
ಉತ್ತರ ಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಬಿಹಾರ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ತಲಾ ಒಂದು ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ.
ಕ್ರಮವಾಗಿ ಖತೌಲಿ ಮತ್ತು ರಾಂಪುರದಿಂದ ರಾಜಕುಮಾರಿ ಸೈನಿ ಮತ್ತು ಆಕಾಶ್ ಸಕ್ಸೇನಾ, ಬಿಹಾರದ ಕುರ್ಹಾನಿಯಿಂದ ಕೇದಾರ್ ಪ್ರಸಾದ್ ಗುಪ್ತಾ, ರಾಜಸ್ಥಾನದ ಸರ್ದಾರ್ಶಹರ್‌ನಿಂದ ಅಶೋಕ್ ಕುಮಾರ್ ಪಿಂಚಾ ಮತ್ತು ಛತ್ತೀಸ್‌ಗಢದ ಭಾನುಪ್ರತಾಪುರದಿಂದ ಬ್ರಹ್ಮಾನಂದ್ ನೇತಮ್ ಅವರನ್ನು ಕಣಕ್ಕಿಳಿಸಿದೆ.