ಪ್ರಿಯತಮೆ ಕೊಂದು ತುಂಡರಿಸಿದ ಪ್ರಕರಣ: ಆರೋಪಿಯೊಂದಿಗೆ ಸ್ಥಳ ಮಹಜರು; ಮರಣದಂಡನೆ ವಿಧಿಸಿ- ಶ್ರದ್ದಾಳ ತಂದೆ ಒತ್ತಾಯ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ದಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ನರಹಂತಕ ಆಫ್ತಾಬ್ ಬಗ್ಗೆ ಬಗೆದಷ್ಟು ಮಾಹಿತಿಗಳು ಹೊರಬರುತ್ತಿವೆ. ಇಂದು ಶ್ರದ್ದಾ ಕೊಲೆಯಾದ ಚತ್ತಾರ್ ಪುರದ  ಫ್ಲಾಟ್ ಹಾಗೂ ಆಕೆಯ ದೇಹವನ್ನು ತುಂಡರಿಸಿ ಬಿಸಾಡಿದ್ದ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಆರೋಪಿ ಅಫ್ತಾಬ್ ಪೂನಾವಾಲ
ಆರೋಪಿ ಅಫ್ತಾಬ್ ಪೂನಾವಾಲ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ದಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ನರಹಂತಕ ಆಫ್ತಾಬ್ ಬಗ್ಗೆ ಬಗೆದಷ್ಟು ಮಾಹಿತಿಗಳು ಹೊರಬರುತ್ತಿವೆ. ಇಂದು ಶ್ರದ್ದಾ ಕೊಲೆಯಾದ ಚತ್ತಾರ್ ಪುರದ  ಫ್ಲಾಟ್ ಹಾಗೂ ಆಕೆಯ ದೇಹವನ್ನು ತುಂಡರಿಸಿ ಬಿಸಾಡಿದ್ದ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಆರೋಪಿ ಆಫ್ತಾಬ್ ಶ್ರದ್ದಾಳ ಫೋನ್ ನನ್ನು ಅರಣ್ಯದಲ್ಲಿಯೇ ಹೂತಿದ್ದ. ಆಕೆಯ ಕೊನೆಯ ಲೋಕೇಷನ್ ಪತ್ತೆಯಾದ ನಂತರ ಅದನ್ನು ಮರಳಿ ಪಡೆಯಲಾಗಿದೆ. ಶ್ರದ್ದಾಳ ದೇಹವನ್ನು ತುಂಡರಿಸಲು ಬಳಸಿದ ಆಯುಧಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂದು ಬಿಂಬಿಸಲು ಆಕೆಯ ಇನ್ಸ್ಟಾಗಾಮ್ ಖಾತೆಯನ್ನು ಜೂನ್ ವರೆಗೂ ಆತನೇ ಬಳಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಶ್ರದ್ದಾಳನನ್ನು ಕೊಲೆ ಮಾಡಿದ ನಂತರ ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಆತ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾನೆ. ಕೊಲೆ ಮಾಡಿ ರಕ್ತದ ಕಲೆಯೂ ಇಲ್ಲದಂತೆ ಮಾಡಿದ್ದರಿಂದ ಮೂಳೆ ಚೂರು ಬಿಟ್ಟರೆ ಬೇರೆ ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಮೂಳೆಯ ಡಿಎನ್ ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ. ಪ್ರಿಯತಮೆಯನ್ನು ಕೊಂದು ಮತ್ತೊಬ್ಬಳ ಜೊತೆಗೆ ಆರೋಪಿ ರೋಮ್ಯಾನ್ಸ್ ನಡೆಸಿರುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಈ ಮಧ್ಯೆ ಆರೋಪಿ ಅಫ್ತಾಬ್ ಗೆ ಮರಣದಂಡನೆಗೆ  ಶಿಕ್ಷೆಯಾಗಬೇಕೆಂದು ಶ್ರದ್ದಾಳ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ದೆಹಲಿ ಪೊಲೀಸರು ಬಗ್ಗೆ ನಂಬಿಕೆಯಿದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಆಫ್ತಾಬ್ ಜೊತೆಗೆ ಶ್ರದ್ದಾ ಸಂಪರ್ಕದಲ್ಲಿರುವುದು ನನಗೆ ಗೊತ್ತಿರಲಿಲ್ಲ. ವಾಸೈನಲ್ಲಿ ಮೊದಲ ದೂರು ದಾಖಲಿಸಿರುವುದಾಗಿ ಶ್ರದ್ದಾಳ ತಂದೆ ವಿಕಾಸ್ ವಾಲ್ಕರ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಜುಲೈನಿಂದ ಶ್ರದ್ದಾ ಮೇಸೆಜ್ ಮಾಡದಿದ್ದರಿಂದ ಆತಂಕಗೊಂಡಿದ್ದೆ. ಆಕೆಯ ಫೋನ್ ಸ್ವೀಚ್ ಆಫ್ ಆಗಿತ್ತು. ಇತರ ಸ್ನೇಹಿತರ ಬಳಿ ವಿಚಾರಿಸಿದ ನಂತರ ಆಕೆಯ ಸಹೋದರಿಗೆ ಮಾಹಿತಿ ನೀಡಿ, ಪೊಲೀಸರನ್ನು ಸಂಪರ್ಕಿಸಲಾಯಿತು ಎಂದು ಶ್ರದ್ದಾಳ ಸ್ನೇಹಿತ ಲಕ್ಷ್ಮಣ್ ನಾದಿರ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com