ಗುಜರಾತ್ ವಿಧಾನಸಭೆ ಚುನಾವಣೆ: ಬಿಜೆಪಿ ನಾಯಕರಲ್ಲಿ ಅಸಮಾಧಾನ ಹೆಚ್ಚಳ; ಅಖಾಡಕ್ಕಿಳಿದ ಅಮಿತ್ ಶಾ

ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗಿರುವ ಗುಜರಾತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಕಣದಲ್ಲಿರುವ ರಾಜ್ಯದಲ್ಲಿ ಬಿಜೆಪಿ ಹಲವು ವರ್ಷಗಳಿಂದ ಕಾಣದ ಅಸಹಜ ಅಸಮಾಧಾನವನ್ನು ಈ ಬಾರಿ ಎದುರಿಸುತ್ತಿದೆ ಎಂದು ನೋಡುತ್ತಿದೆ. 
ಅಮಿತ್ ಶಾ
ಅಮಿತ್ ಶಾ
Updated on

ಅಹಮದಾಬಾದ್: ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗಿರುವ ಗುಜರಾತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಕಣದಲ್ಲಿರುವ ರಾಜ್ಯದಲ್ಲಿ ಬಿಜೆಪಿ ಹಲವು ವರ್ಷಗಳಿಂದ ಕಾಣದ ಅಸಹಜ ಅಸಮಾಧಾನವನ್ನು ಈ ಬಾರಿ ಎದುರಿಸುತ್ತಿದೆ ಎಂದು ನೋಡುತ್ತಿದೆ. (Gujarat assembly election)

ಬಿಜೆಪಿ ಘೋಷಿಸಿರುವ 178 ಅಭ್ಯರ್ಥಿಗಳ ನಾಮನಿರ್ದೇಶನಗಳ ಪೈಕಿ 12 ಅಭ್ಯರ್ಥಿಗಳನ್ನು ನಿನ್ನೆ ತಡರಾತ್ರಿ ಪಕ್ಷವು ಘೋಷಿಸಿದೆ - ಈ ಬಾರಿ ಬಿಜೆಪಿಯಲ್ಲಿ ಕನಿಷ್ಠ 40 ಅಸೆಂಬ್ಲಿ ಸ್ಥಾನಗಳು ಅಭ್ಯರ್ಥಿಗಳ ಮಧ್ಯೆ ವಿವಾದಕ್ಕೆ ಕಾರಣವಾಗಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆಯಲಿದೆ. ಈ ಮಧ್ಯೆ, ಬಿಜೆಪಿ ನಿನ್ನೆ 12 ಅಭ್ಯರ್ಥಿಗಳನ್ನು ಘೋಷಿಸಿದೆ. ಇದರೊಂದಿಗೆ 182 ಸದಸ್ಯ ಬಲದ ವಿಧಾನಸಭೆಗೆ 178 ಅಭ್ಯರ್ಥಿಗಳನ್ನು ಪಕ್ಷ ಘೋಷಿಸಿದೆ.

ಮೊನ್ನೆ ಭಾನುವಾರ, ಅಮಿತ್ ಷಾ ಅವರು ಬಿಜೆಪಿ ಕಚೇರಿಯಲ್ಲಿ ಪಕ್ಷದ ನಾಯಕರೊಂದಿಗೆ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಸರಣಿ ಸಭೆಗಳನ್ನು ನಡೆಸಿದ್ದಾರೆ. ನಿನ್ನೆ ಅವರು ಪಕ್ಷದ ನಾಯಕರಲ್ಲಿ ಅಸಮಾಧಾನವನ್ನು ಹೋಗಲಾಡಿಸುವ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷವು ಉಳಿದ 16 ಅಭ್ಯರ್ಥಿಗಳನ್ನು ಮೊಬೈಲ್ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು ಎನ್ನಲಾಗಿದೆ. 

ಮತ್ತೊಂದೆಡೆ, ಬಯಾದ್ ಕ್ಷೇತ್ರದಿಂದ ಪಕ್ಷವು ಕೈಬಿಟ್ಟಿರುವ ಧವಲಸಿಂಗ್ ಝಾಲಾ ಅವರ ಬೆಂಬಲಿಗರು ಬಿಜೆಪಿ ಕೇಂದ್ರ ಕಚೇರಿ ಕಮಲಂನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಟಾಣ್ ಕ್ಷೇತ್ರದಲ್ಲೂ ಇದೇ ಆಗಿದೆ. ಅಭ್ಯರ್ಥಿಗಳ ಮೊದಲ ಮತ್ತು ಎರಡನೇ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಪಕ್ಷದಲ್ಲಿ ಗೊಂದಲ ಆರಂಭವಾಗಿದೆ. ಅಮಿತ್ ಶಾ ಅವರು ಇನ್ನೂ ಎರಡು-ಮೂರು ದಿನ ರಾಜ್ಯದಲ್ಲಿ ಪಕ್ಷದೊಳಗಿನ ಅಸಮಾಧಾನ ಬಗೆಹರಿಸಲು ಇರಬೇಕಾಗುತ್ತದೆ. 

ಮೊನ್ನೆ ಭಾನುವಾರ ಸಂಜೆ ಕಮಲಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಮಿತ್ ಶಾ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು. ಸಿಎಂ ಭೂಪೇಂದ್ರ ಪಟೇಲ್, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ನಾಲ್ಕು ರಾಜ್ಯಗಳ ವಲಯಗಳ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com