ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್‌ನ ಅಜಯ್ ಮಕೇನ್ ರಾಜೀನಾಮೆ

ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್‌ನ ಅಜಯ್ ಮಕೇನ್ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ವಕ್ತಾರ ಅಜಯ್ ಮಕೇನ್
ಕಾಂಗ್ರೆಸ್ ವಕ್ತಾರ ಅಜಯ್ ಮಕೇನ್

ಜೈಪುರ: ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್‌ನ ಅಜಯ್ ಮಕೇನ್ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಅಜಯ್ ಮಾಕನ್ Ajay Maken ಅವರು ಪಕ್ಷದ ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,  ಸೆಪ್ಟೆಂಬರ್ ಅಂತ್ಯದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿಎಂ ಹುದ್ದೆಯನ್ನು ಬಿಟ್ಟುಕೊಡಲು ನಿರಾಕರಿಸಿದಾಗ ಮಕೇನ್ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗೆಹ್ಲೋಟ್‌ಗೆ ನಿಷ್ಠರಾಗಿರುವ 90 ಕ್ಕೂ ಹೆಚ್ಚು ಶಾಸಕರು ಗೆಹ್ಲೋಟ್ ಬದಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪಕ್ಷದ ಪ್ರಮುಖ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಬದಲಿಗೆ ಗೆಹ್ಲೋಟ್ ಅವರನ್ನು ಸಿಎಂ ಹುದ್ದೆಯಿಂದ ಕೈಬಿಡುವಂತೆ ಮಾಡುವ ಕಾಂಗ್ರೆಸ್ ನಾಯಕತ್ವದ ಪ್ರಯತ್ನವನ್ನು ವಿರೋಧಿಸಿ ತಮ್ಮ ರಾಜೀನಾಮೆಯನ್ನು ನೀಡಲು ಸ್ಪೀಕರ್‌ ಬಳಿ ತೆರಳಿದ್ದರು.

ಶಾಸಕರ ವಿರುದ್ಧ ಪಕ್ಷವು ಕ್ರಮ ತೆಗೆದುಕೊಳ್ಳುತ್ತದೆ ಎಂದು ಮಕೇನ್ ನಿರೀಕ್ಷಿಸಿದ್ದರು, ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ.  ಇದು ಕಾಂಗ್ರೆಸ್‌ನ ರಾಜಸ್ಥಾನದ ಉಸ್ತುವಾರಿ ಸ್ಥಾನವನ್ನು ತ್ಯಜಿಸುವ ಅವರ ನಿರ್ಧಾರಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಕೇನ್ ನಿರ್ದಿಷ್ಟವಾಗಿ ಮೂವರು ಶಾಸಕರಾದ ಮಹೇಶ್ ಜೋಶಿ, ಧರ್ಮೇಂದ್ರ ರಾಥೋಡ್ ಹಾಗೂ  ಶಾಂತಿ ಧರಿವಾಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಶಾಸಕರ ಸಮಾನಾಂತರ ಸಭೆಯನ್ನು ನಡೆಸಿದ ಅವರು ಗೆಹ್ಲೋಟ್ ಅವರನ್ನು ಮಾತ್ರ ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com