ಕ್ವಾರಂಟೈನ್ ಮುಗಿಸಿದ ಮೂರನೇ ಚೀತಾ, ಕುನೊ ಪಾರ್ಕ್ ನ ದೊಡ್ಡ ಆವರಣಕ್ಕೆ ಬಿಡುಗಡೆ
ನಮೀಬಿಯಾದಿಂದ ಭಾರತದ ಮಧ್ಯ ಪ್ರದೇಶಕ್ಕೆ ತರಲಾಗಿರುವ 8 ಚೀತಾಗಳ ಪೈಕಿ ಮತ್ತೊಂದು ಚೀತಾದ ಕಡ್ದಾಯ ಕ್ವಾರಂಟೈನ್ ಮುಗಿದ ಹಿನ್ನೆಲೆಯಲ್ಲಿ ಶುಕ್ರಾವರ ಕುನೊ ಕಾಡಿನ ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 18th November 2022 10:31 PM | Last Updated: 19th November 2022 02:38 PM | A+A A-

ಚೀತಾ
ಭೋಪಾಲ್: ನಮೀಬಿಯಾದಿಂದ ಭಾರತದ ಮಧ್ಯ ಪ್ರದೇಶಕ್ಕೆ ತರಲಾಗಿರುವ 8 ಚೀತಾಗಳ ಪೈಕಿ ಮತ್ತೊಂದು ಚೀತಾದ ಕಡ್ದಾಯ ಕ್ವಾರಂಟೈನ್ ಮುಗಿದ ಹಿನ್ನೆಲೆಯಲ್ಲಿ ಶುಕ್ರಾವರ ಕುನೊ ಕಾಡಿನ ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುನು ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಸೆಪ್ಟೆಂಬರ್ 17 ರಂದು ಚೀತಾಗಳನ್ನು ಬಿಡಲಾಗಿತ್ತು. ಅವು ಇಲ್ಲಿನ ಹವಾಮಾನ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುವವರೆಗೂ ಅವುಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಚೀತಾಗಳನ್ನು ಕಾಡಿನಲ್ಲೇ ನಿರ್ದಿಷ್ಟ ಪ್ರದೇಶದಲ್ಲಿರಿಸಲಾಗಿತ್ತು. ಈಗ ಮೂರು ಚೀತಾಗಳನ್ನು ಕಾಡಿನ ದೊಡ್ಡ ಪ್ರದೇಶಕ್ಕೆ ಬಿಡಲಾಗಿದೆ.
ಈ ಮುಂಚೆ ಎಲ್ಟನ್ ಮತ್ತು ಫ್ರೆಡ್ಡಿ ಎಂಬ ಎರಡು ಚೀತಾಗಳನ್ನು ಕಾಡಿಗೆ ಬಿಡಲಾಗಿತ್ತು. ಒಬಾನ್ ಎಂಬ ಚೀತಾವನ್ನು ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ: ಕ್ವಾರಂಟೈನ್ ಬಳಿಕ 2 ಚೀತಾಗಳು ದೊಡ್ಡ ಆವರಣಕ್ಕೆ ಬಿಡುಗಡೆ, 24 ಗಂಟೆಗಳಲ್ಲೇ ಮೊದಲ ಬೇಟೆ
"ಒಬಾನ್ ಅನ್ನು ಇಂದು ಕ್ವಾರಂಟೈನ್ ವಲಯದಿಂದ ಐದು ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ. ಎಲ್ಟನ್ ಮತ್ತು ಫ್ರೆಡ್ಡಿಯನ್ನು ನವೆಂಬರ್ 5 ರಂದು ಬಿಡುಗಡೆ ಮಾಡಲಾಗಿತ್ತು" ಎಂದು ಕೆಎನ್‌ಪಿ ವಿಭಾಗೀಯ ಅರಣ್ಯ ಅಧಿಕಾರಿ(ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಪಿಟಿಐಗೆ ತಿಳಿಸಿದ್ದಾರೆ.