ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯುವವರೆಗೂ ನಾವು ವಿರಮಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಇಂದಿನ ಜಗತ್ತಿನಲ್ಲಿ, ಭಯೋತ್ಪಾದನೆಯ ಅಪಾಯಗಳ ಬಗ್ಗೆ ಜಗತ್ತಿಗೆ ಯಾರೂ ನೆನಪಿಸುವ ಅಗತ್ಯವಿಲ್ಲ. ಆದರೂ, ಕೆಲವು ವಲಯಗಳಲ್ಲಿ ಭಯೋತ್ಪಾದನೆಯ ಬಗ್ಗೆ ಇನ್ನೂ ಕೆಲವು ತಪ್ಪು ತಿಳುವಳಿಕೆಗಳಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಹೇಳಿದ್ದಾರೆ.
Published on

ನವದೆಹಲಿ: ಇಂದಿನ ಜಗತ್ತಿನಲ್ಲಿ, ಭಯೋತ್ಪಾದನೆಯ ಅಪಾಯಗಳ ಬಗ್ಗೆ ಜಗತ್ತಿಗೆ ಯಾರೂ ನೆನಪಿಸುವ ಅಗತ್ಯವಿಲ್ಲ. ಆದರೂ, ಕೆಲವು ವಲಯಗಳಲ್ಲಿ ಭಯೋತ್ಪಾದನೆಯ(terrorism) ಬಗ್ಗೆ ಇನ್ನೂ ಕೆಲವು ತಪ್ಪು ತಿಳುವಳಿಕೆಗಳಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಹೇಳಿದ್ದಾರೆ.(PM Narendra Modi)

ಅವರು 'ಭಯೋತ್ಪಾದನೆಗೆ ಹಣವಿಲ್ಲ' ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ, ಭಯೋತ್ಪಾದನೆಗೆ ಸಂಬಂಧಪಟ್ಟ ಒಂದೇ ಒಂದು ದಾಳಿಯು ಸಹ ಹಲವಾರು ಎಂದು ನಾವು ಪರಿಗಣಿಸುತ್ತೇವೆ. ಕಳೆದುಹೋದ ಒಂದು ಜೀವವೂ ಸಹ ಹಲವಾರು. ಹಾಗಾಗಿ, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವವರೆಗೂ ನಾವು ವಿರಮಿಸುವುದಿಲ್ಲ ಎಂದು ಘೋಷಿಸಿದರು.

ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ದೊಡ್ಡ, ಪೂರ್ವಭಾವಿ, ವ್ಯವಸ್ಥಿತ ಪ್ರತಿಕ್ರಿಯೆಯ ಅಗತ್ಯವಿದೆ, ನಮ್ಮ ನಾಗರಿಕರು ಸುರಕ್ಷಿತವಾಗಿರಬೇಕೆಂದರೆ, ನಮ್ಮ ಮನೆ ಬಾಗಿಲ ತನಕ ಭಯೋತ್ಪಾದನೆ ಬರುವವರೆಗೆ ನಾವು ಕಾಯಲು ಸಾಧ್ಯವಿಲ್ಲ. ಭಯೋತ್ಪಾದಕರನ್ನು ಬೆನ್ನಟ್ಟಿಕೊಂಡು ಹೋಗಬೇಕು, ಅವರ ಬೆಂಬಲ ಜಾಲಗಳನ್ನು ಮುರಿಯಬೇಕು, ಅವರಿಗೆ ಹಣ ಸಿಗುವಂತಾಗಬಾರದು, ಅವರ ಆರ್ಥಿಕತೆಗೆ ಹೊಡೆತ ನೀಡಬೇಕು, ಆಗ ಮಾತ್ರ ಭಯೋತ್ಪಾದನೆಯನ್ನು ಕಿತ್ತೊಗೆಯಲು ಸಾಧ್ಯ ಎಂದರು.(India)

ಭಯೋತ್ಪಾದಕರ ವಿಭಿನ್ನ ದಾಳಿಗಳಿಗೆ ಪ್ರತಿಕ್ರಿಯೆಯ ತೀವ್ರತೆಯು ಅದು ಎಲ್ಲಿ ಸಂಭವಿಸುತ್ತದೆ ಎಂಬುದರ ಆಧಾರದ ಮೇಲೆ ಬದಲಾಗುವುದಿಲ್ಲ. ಎಲ್ಲಾ ಭಯೋತ್ಪಾದಕ ದಾಳಿಗಳು ಸಮಾನ ಆಕ್ರೋಶ ಮತ್ತು ಕ್ರಮವನ್ನು ಹೊಂದಿರುತ್ತವೆ ಎಂದರು.

ಈ ಸಮ್ಮೇಳನ ಭಾರತದಲ್ಲಿ ನಡೆಯುತ್ತಿರುವುದು ಗಮನಾರ್ಹ. ಜಗತ್ತು ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸುವ ಮೊದಲೇ ನಮ್ಮ ದೇಶವು ಅದರ ಭೀಕರತೆಯನ್ನು ಎದುರಿಸಿದೆ. ದಶಕಗಳಿಂದ ವಿವಿಧ ರೂಪಗಳಲ್ಲಿ ಭಯೋತ್ಪಾದನೆ ಭಾರತವನ್ನು ನೋಯಿಸಲು ಪ್ರಯತ್ನಿಸಿದೆ ಆದರೆ ನಾವು ಭಯೋತ್ಪಾದನೆಯನ್ನು ಧೈರ್ಯದಿಂದ ಎದುರಿಸಿದ್ದೇವೆ ಎಂದರು.

ಭಯೋತ್ಪಾದಕ ಸಂಘಟನೆಗಳು ಹಲವು ಮೂಲಗಳ ಮೂಲಕ ಹಣವನ್ನು ಪಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ-ಅದಕ್ಕೆ ಕೆಲವು ರಾಜ್ಯ, ಕೆಲವು ದೇಶಗಳು ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತವೆ. ಅವು ರಾಜಕೀಯ, ಸೈದ್ಧಾಂತಿಕ ಮತ್ತು ಆರ್ಥಿಕ ಕೊಡುಗೆಗಳನ್ನು ನೀಡುತ್ತವೆ ಎಂಬುದು ಗೊತ್ತಿರುವ ವಿಚಾರ.ಆಮೂಲಾಗ್ರೀಕರಣ ಮತ್ತು ಉಗ್ರವಾದದ ಸಮಸ್ಯೆಯನ್ನು ನಾವು ಜಂಟಿಯಾಗಿ ಪರಿಹರಿಸುವುದು ಮುಖ್ಯವಾಗಿದೆ. ಆಮೂಲಾಗ್ರೀಕರಣವನ್ನು ಬೆಂಬಲಿಸುವವರಿಗೆ ಯಾವುದೇ ದೇಶದಲ್ಲಿ ಸ್ಥಾನವಿಲ್ಲ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com