ಹೆಚ್ಚುತ್ತಿರುವ 'ಭಯೋತ್ಪಾದನೆ ಬೆದರಿಕೆ' ಮಟ್ಟಹಾಕಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಒತ್ತಾಯ

ಭಯೋತ್ಪಾದನೆ ಮಟ್ಟಹಾಕಲು ನಿರುತ್ಸಾಹಗೊಳ್ಳದಂತೆ ಶನಿವಾರ ಬಲವಾಗಿ ಪ್ರತಿಪಾದಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಈ ಅಪಾಯವನ್ನು ಪರಿಹರಿಸಲು ರಾಜಕೀಯ ಬದಿಗೊತ್ತುವಂತೆ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ. 
ಎಸ್. ಜೈಶಂಕರ್
ಎಸ್. ಜೈಶಂಕರ್

ನವದೆಹಲಿ: ಭಯೋತ್ಪಾದನೆ ಮಟ್ಟಹಾಕಲು ನಿರುತ್ಸಾಹಗೊಳ್ಳದಂತೆ ಶನಿವಾರ ಬಲವಾಗಿ ಪ್ರತಿಪಾದಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಈ ಅಪಾಯವನ್ನು ಪರಿಹರಿಸಲು ರಾಜಕೀಯ ಬದಿಗೊತ್ತುವಂತೆ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ. 

ಇಲ್ಲಿ ನಡೆದ 'ನೋ ಮನಿ ಫಾರ್ ಟೆರರ್' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, ಕೆಲವರು ಭಯೋತ್ಪಾದನೆಯನ್ನು ಸರ್ಕಾರಿ-ಕೌಶಲದ ಸಾಧನವಾಗಿ ಬಳಸಿಕೊಳ್ಳುವ ಪ್ರವೃತ್ತಿ ಮತ್ತು ಇತರರು ಅದನ್ನು ಸಮರ್ಥಿಸಿಕೊಳ್ಳಲು ಸಿದ್ಧರಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆಯ ಬೆದರಿಕೆಗೆ ಪ್ರಮಾಣ ಮತ್ತು ತೀವ್ರತೆ ಹೆಚ್ಚಿದೆ ಎಂದರು. 

"ಭಯೋತ್ಪಾದನೆಯು ಭಯೋತ್ಪಾದನೆಯಾಗಿದೆ ಮತ್ತು ರಾಜಕೀಯವಾಗಿ ಅದನ್ನು ಎಂದಿಗೂ ಸಮರ್ಥಿಸಲು ಸಾಧ್ಯವಿಲ್ಲ. ಈ ಅಪಾಯವನ್ನು ಎದುರಿಸಲು ರಾಜಕೀಯವನ್ನು ಬದಿಗೊತ್ತಬೇಕಾಗಿದೆ. ಎಲ್ಲಾ ರಂಗಗಳಲ್ಲಿ, ಎಲ್ಲಾ ಸಂದರ್ಭಗಳಲ್ಲಿ ಮತ್ತು ಎಲ್ಲಾ ಸ್ಥಳಗಳಲ್ಲಿ ಭಯೋತ್ಪಾದನೆ ವಿರುದ್ಧ ದೃಢವಾಗಿ ಹೋರಾಡಬೇಕು ಎಂದು ಜೈಶಂಕರ್ ಹೇಳಿದರು.  ಎರಡು ದಿನಗಳ ಸಮ್ಮೇಳನದಲ್ಲಿ ಜೈಶಂಕರ್ ಮಾಡಿದ ಭಾಷಣವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಭಯೋತ್ಪಾದನೆಗೆ ಹಣಕಾಸೂ ಪೂರೈಕೆ ವಿರುದ್ಧ ಹೋರಾಟ ಈ ವೇದಿಕೆಯ ಉದ್ದೇಶವಾಗಿದೆ. ಭಯೋತ್ಪಾದನೆ ಅಂತಾ ಬಂದಾಗ ನಾವು, ಬೇರೆ ದಾರಿ ನೋಡಬಾರದು, ಎಂದಿಗೂ ರಾಜೀಯಾಗಬಾರದು, ನ್ಯಾಯವನ್ನು ಖಚಿತಪಡಿಸಿಕೊಳ್ಳುವ ನಮ್ಮ ಅನ್ವೇಷಣೆಯನ್ನು ನಾವು ಎಂದಿಗೂ ಬಿಟ್ಟುಕೊಡಬಾರದು ಎಂದು ಅವರು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com