ತಿಹಾರ್ ಜೈಲಿನಲ್ಲಿ ಬಾಡಿ ಮಸಾಜ್ ವಿಡಿಯೋ ಲೀಕ್: ಇಡಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸತ್ಯೇಂದ್ರ ಜೈನ್

ತಿಹಾರ್ ಜೈಲಿನಲ್ಲಿ ಬಾಡಿ ಮಸಾಜ್ ವಿಡಿಯೋ ಲೀಕ್ ವಿಚಾರಕ್ಕೆ ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲಯ ವಿರುದ್ಧ ನಿಂದನೆ ಕ್ರಮಕ್ಕೆ ಕೋರಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಕಾನೂನು ತಂಡ ಶನಿವಾರ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಸತ್ಯೇಂದ್ರ ಜೈನ್ ಬಾಡಿ ಮಸಾಜ್ ಚಿತ್ರ
ಸತ್ಯೇಂದ್ರ ಜೈನ್ ಬಾಡಿ ಮಸಾಜ್ ಚಿತ್ರ

ನವದೆಹಲಿ: ತಿಹಾರ್ ಜೈಲಿನಲ್ಲಿ ಬಾಡಿ ಮಸಾಜ್ ವಿಡಿಯೋ ಲೀಕ್ ವಿಚಾರಕ್ಕೆ ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲಯ ವಿರುದ್ಧ ನಿಂದನೆ ಕ್ರಮಕ್ಕೆ ಕೋರಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಕಾನೂನು ತಂಡ ಶನಿವಾರ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ನ್ಯಾಯಾಲಯದಲ್ಲಿ ನೀಡಿದ ಭರವಸೆಯ ಹೊರತಾಗಿಯೂ ಇಡಿ ಸಿಸಿಟಿವಿ ವಿಡಿಯೋವನ್ನು ಸೋರಿಕೆ ಮಾಡಿದೆ ಎಂದು ಜೈನ್ ಅವರ ಕಾನೂನು ತಂಡ ಆರೋಪಿಸಿದೆ. ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಇಡಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿದ್ದಾರೆ. 

ಬಿಜೆಪಿ ಮತ್ತು ಇತರರಿಗೆ ತಿಹಾರ್ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಕುರಿತು ಸತ್ಯೇಂದ್ರ ಜೈನ್ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಲಯ ಇಡಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.  ಗೌಪ್ಯವಾದ ಸಿಸಿಟಿವಿ ದೃಶ್ಯಗಳನ್ನು ಬಿಜೆಪಿ ಹೇಗೆ ಪಡೆಯಿತು ಮತ್ತು ಅದನ್ನು ಏಕೆ ಪ್ರಸಾರ ಮಾಡಲಾಯಿತು? ಎಂಬುದನ್ನು ಸೋಮವಾರ ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದು  ಸತ್ಯೇಂದ್ರ ಜೈನ್ ಪರ ವಕೀಲ ಮೊಹಮ್ಮದ್ ಇರ್ಷಾದ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ದೇಹವನ್ನು ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com