ಮೋದಿ 'ಸ್ವಯಂಸೇವಕ' ಅಷ್ಟೇ, ಅವರ ಸ್ವತಂತ್ರ ಕೆಲಸಗಳನ್ನು ಆರ್‌ಎಸ್‌ಎಸ್ ನಿಯಂತ್ರಿಸುವುದಿಲ್ಲ: ಭಾಗವತ್
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಸ್ವಯಂ ಸೇವಕರಾಗಿದ್ದರೂ, ಅವರ ಸ್ವತಂತ್ರ ಕೆಲಸಗಳನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್...
Published: 20th November 2022 06:59 PM | Last Updated: 20th November 2022 06:59 PM | A+A A-

ಮೋಹನ್ ಭಾಗವತ್
ಜಬಲಪುರ್(ಮಧ್ಯ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಸ್ವಯಂ ಸೇವಕರಾಗಿದ್ದರೂ, ಅವರ ಸ್ವತಂತ್ರ ಕೆಲಸಗಳನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಇಲ್ಲಿನ ಸ್ಥಳೀಯ ಸಮುದಾಯದ ಪ್ರಮುಖರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಭಾಗವತ್ ಅವರು,
"ಸಂಘದ ಹೆಸರು ಬಂದಾಗ, ಜನ ಮೋದಿ ಜಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಮೋದಿ ಜಿ ನಮ್ಮ `ಸ್ವಯಂಸೇವಕ' ಅಷ್ಟೇ. ಸ್ವತಂತ್ರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ತಿಳಿಸಿದರು.
ಇದನ್ನು ಓದಿ: ಆರ್ ಎಸ್ಎಸ್ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಳ ಬಗ್ಗೆ ಉನ್ನತ ನಾಯಕರ ಚಿಂತನೆ
ಯಾರಾದರೂ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಜನ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಬಗ್ಗೆಯೂ ಯೋಚಿಸುತ್ತಾರೆ. ಆ ಸಂಘಟನೆಯಲ್ಲಿಯೂ ನಮ್ಮ ಸ್ವಯಂಸೇವಕರು ಇದ್ದಾರೆ ಮತ್ತು ಅವರ ಚಿಂತನೆಯೂ ಇದೇ ಆಗಿದೆ ಎಂದು ಅವರು ಹೇಳಿದರು.
"ಆದರೆ ಇವೆಲ್ಲವೂ ಸಂಘವಲ್ಲ. ಅವರು ತಮ್ಮದೇ ಆದ ಕೆಲಸವನ್ನು ಮಾಡುತ್ತಿದ್ದಾರೆ. ಸಂಘ ಸಹ ತನ್ನದೇ ಆದ ಸ್ವತಂತ್ರ ಕೆಲಸವನ್ನು ಮಾಡುತ್ತಿದೆ" ಎಂದು ಭಾಗವತ್ ಸ್ಪಷ್ಟಪಡಿಸಿದರು.
ಆರ್‌ಎಸ್‌ಎಸ್ ನೊಂದಿಗೆ ಹಲವು ವ್ಯಕ್ತಿಗಳು(ಸ್ವಯಂಸೇವಕರಾಗಿದ್ದವರು) ಸಂಪರ್ಕವನ್ನು ಹೊಂದಿದ್ದಾರೆ. ಕೆಲವೊಮ್ಮೆ ಸಂಘವು ಒಳ್ಳೆಯ ಉದ್ದೇಶಕ್ಕಾಗಿ ಅವರಿಗೆ ಸಹಾಯ ಮಾಡುತ್ತದೆ. ಆದರೆ ಅವರ ಮೇಲೆ ಸಂಘ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ" ಎಂದು ಭಾಗವತ್ ಒತ್ತಿ ಹೇಳಿದ್ದಾರೆ.
ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ. ಅದು ಜೀವನ ವಿಧಾನವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.