
ನವದೆಹಲಿ: ಆಧಾರ್ ದುರುಪಯೋಗವನ್ನು ತಡೆಯಲು ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಕಾರ್ಡ್ ಅನ್ನು ಒಪ್ಪಿಕೊಳ್ಳುವ ಮೊದಲು ಅದನ್ನು ಪರಿಶೀಲಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ರಾಜ್ಯ ಸರ್ಕಾರಗಳಿಗೆ ಮತ್ತು ಸಂಸ್ಥೆಗಳಿಗೆ ಸೂಚಿಸಿದೆ ಎಂದು ಅಧಿಕೃತ ಪ್ರಕಟಣೆ ಗುರುವಾರ ತಿಳಿಸಿದೆ.
ಯಾವುದೇ ವ್ಯಕ್ತಿ ನೀಡುವ ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್, ಆಧಾರ್‌ನ ಯಾವುದೇ ರೂಪದ ನೈಜತೆಯನ್ನು ಸ್ಥಾಪಿಸಲು ಆಧಾರ್ ಹೊಂದಿರುವವರ ಒಪ್ಪಿಗೆಯನ್ನು ಅನುಸರಿಸಿ ಆಧಾರ್ ಸಂಖ್ಯೆಯನ್ನು ಪರಿಶೀಲಿಸುವುದು ಸರಿಯಾದ ಕ್ರಮ ಎಂದು ಯುಐಡಿಎಐ ಹೇಳಿದೆ.
"ಆಧಾರ್ ಬಳಕೆಗೂ ಮುನ್ನ ಪರಿಶೀಲನೆಯ ಅಗತ್ಯವನ್ನು ಒತ್ತಿಹೇಳಿರುವ ಯುಐಡಿಎಐ, ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸಲ್ಲಿಸಿದಾಗಲೆಲ್ಲ ಅದನ್ನು ಪರಿಶೀಲಿಸಬೇಕು ಮತ್ತು ಈ ಅಗತ್ಯ ನಿರ್ದೇಶನವನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಯುಐಡಿಎಐ ಮನವಿ ಮಾಡಿದೆ.
ಆಧಾರ್ ಪರಿಶೀಲನೆಯ ಅಗತ್ಯವನ್ನು ಒತ್ತಿಹೇಳಲು ಮತ್ತು ಅನುಸರಿಸಬೇಕಾದ ಪ್ರೋಟೋಕಾಲ್ ಅನ್ನು ನಿರ್ದಿಷ್ಟಪಡಿಸಲು ಯುಐಡಿಎಐ ಸುತ್ತೋಲೆ ಹೊರಡಿಸಿದೆ.
Advertisement