ಗೆಹ್ಲೋಟ್, ಪೈಲಟ್ ಒಬ್ಬ ಗದ್ದರ್ ಎಂದಿದ್ದು 'ಅನಿರೀಕ್ಷಿತ', ಬಿಕ್ಕಟ್ಟು ಪರಿಹರಿಸಲಾಗುವುದು: ಕಾಂಗ್ರೆಸ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು "ಗದ್ದರ್" (ನಂಬಿಕೆ ದ್ರೋಹಿ) ಎಂದು ಕರೆದಿರುವುದು "ಅನಿರೀಕ್ಷಿತ" ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶುಕ್ರವಾರ ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್
ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್

ಸನವದ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು "ಗದ್ದರ್"(ನಂಬಿಕೆ ದ್ರೋಹಿ) ಎಂದು ಕರೆದಿರುವುದು "ಅನಿರೀಕ್ಷಿತ" ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಶುಕ್ರವಾರ ಹೇಳಿದ್ದಾರೆ.

ಪಕ್ಷಕ್ಕೆ ಪರಸ್ಪರ ವಾಕ್ಸರ ನಡೆಸುತ್ತಿರುವ ಈ ಇಬ್ಬರು ನಾಯಕರ ಅಗತ್ಯವಿದೆ ಮತ್ತು ರಾಜಸ್ಥಾನ ಘಟಕದಲ್ಲಿನ ಬಿಕ್ಕಟ್ಟನ್ನು ಸಂಘಟನೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್, ಅಶೋಕ್ ಗೆಹ್ಲೋಟ್ ಅವರು ಪಕ್ಷದ ಹಿರಿಯ, ಅನುಭವಿ ನಾಯಕರು. ಟಿವಿ ಸಂದರ್ಶನದಲ್ಲಿ ಅವರು ಸಚಿನ್ ವಿರುದ್ಧ ಈ ರೀತಿ ಪದ ಬಳಸಿರುವುದು ಅನಿರೀಕ್ಷಿತ ಮತ್ತು ನನಗೂ ಅಚ್ಚರಿ ತಂದಿದೆ ಎಂದಿದ್ದಾರೆ.

ಅಶೋಕ್ ಗೆಹ್ಲೋಟ್ ಅವರು ಗುರುವಾರ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಸಚಿನ್ ಪೈಲಟ್ ಒಬ್ಬ "ಗದ್ದರ್" ಮತ್ತು ಅವರು ರಾಜಸ್ಥಾನ ಸಿಎಂ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com