ರಾಜಸ್ಥಾನ ಕಾಂಗ್ರೆಸ್ ಭಿನ್ನಮತ ಶಮನಕ್ಕೆ ಕೆ.ಸಿ.ವೇಣುಗೋಪಾಲ್ ಭೇಟಿ

ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಗದ್ದರ್ (ದೇಶದ್ರೋಹಿ) ಎಂದು ಮುಖ್ಯಮಂತ್ರಿ ಅಶೋಕ್  ಗೆಹ್ಲೋಟ್ ಕರೆದ ನಂತರ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಭಿನ್ನಮತ ತಲೆದೋರಿರುವಂತೆಯೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ನವೆಂಬರ್ 29 ರಂದು ರಾಜಸ್ಥಾನಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ.
ಸಚಿನ್ ಪೈಲಟ್, ಕೆ. ಸಿ. ವೇಣುಗೋಪಾಲ್, ಅಶೋಕ್ ಗೆಹ್ಲೋಟ್
ಸಚಿನ್ ಪೈಲಟ್, ಕೆ. ಸಿ. ವೇಣುಗೋಪಾಲ್, ಅಶೋಕ್ ಗೆಹ್ಲೋಟ್
Updated on

ನವದೆಹಲಿ: ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಗದ್ದರ್ (ದೇಶದ್ರೋಹಿ) ಎಂದು ಮುಖ್ಯಮಂತ್ರಿ ಅಶೋಕ್  ಗೆಹ್ಲೋಟ್ ಕರೆದ ನಂತರ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಭಿನ್ನಮತ ತಲೆದೋರಿರುವಂತೆಯೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ನವೆಂಬರ್ 29 ರಂದು ರಾಜಸ್ಥಾನಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ.

ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯವನ್ನು ಪ್ರವೇಶಿಸುವ ಭಾರತ್ ಜೋಡೋ ಯಾತ್ರೆಯ ವ್ಯವಸ್ಥೆಯನ್ನು ವೇಣುಗೋಪಾಲ್ ಪರಿಶೀಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಯಾತ್ರೆಯ ಸಮಯದಲ್ಲಿ ರಾಜ್ಯ ಘಟಕದಲ್ಲಿನ ಕಿತ್ತಾಟ ಮುನ್ನೆಲೆಗೆ ಬರದಂತೆ ನೋಡಿಕೊಳ್ಳಲು ವೇಣುಗೋಪಾಲ್ ಭೇಟಿಯ ಉದ್ದೇಶವಾಗಿದೆ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. 

ಗೆಹ್ಲೋಟ್ ಮತ್ತು ಪೈಲಟ್ ನಾಯಕತ್ವದ ಸ್ಥಾನದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ, ಗೆಹ್ಲೋಟ್ ಅವರನ್ನು ಬದಲಿಸಲು  ಪೈಲಟ್ ಪ್ರಯತ್ನಿಸುತ್ತಿದ್ದಾರೆ ಮತ್ತು ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆಯ ಯಾವುದೇ ಸೂಚನೆಯಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಬಣಗಳಾಗಿ ಒಡೆದು ಹೋಗಿರುವ ಶಾಸಕರು ಮತ್ತು ಪಕ್ಷದ ನಾಯಕರ ಕೋಪವನ್ನು ತಣ್ಣಗಾಗಿಸುವಲ್ಲಿ ವೇಣುಗೋಪಾಲ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com