ದೆಹಲಿ: ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಗೆ ಡಿಸೆಂಬರ್ 1 ರಂದು ನಾರ್ಕೋ ಪರೀಕ್ಷೆ
ದೆಹಲಿಯ ಬುಲಂದ್ ಶಹರ್ ನಲ್ಲಿ ನಡೆದ ಶ್ರದ್ಧಾ ವಾಕರ್ ಬರ್ಬರ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಡಿಸೆಂಬರ್ 1 ರಂದು ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಾರ್ಕೋ ಪರೀಕ್ಷೆ ನಡೆಸಲು ದೆಹಲಿ...
Published: 29th November 2022 03:02 PM | Last Updated: 29th November 2022 03:02 PM | A+A A-

ಪೊಲೀಸರ ವಶದಲ್ಲಿರುವ ಅಫ್ತಾಬ್
ನವದೆಹಲಿ: ದೆಹಲಿಯ ಬುಲಂದ್ ಶಹರ್ ನಲ್ಲಿ ನಡೆದ ಶ್ರದ್ಧಾ ವಾಕರ್ ಬರ್ಬರ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಡಿಸೆಂಬರ್ 1 ರಂದು ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಾರ್ಕೋ ಪರೀಕ್ಷೆ ನಡೆಸಲು ದೆಹಲಿ ಕೋರ್ಟ್ ಮಂಗಳವಾರ ದೆಹಲಿ ಪೊಲೀಸರಿಗೆ ಅನುಮತಿ ನೀಡಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.
ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಪೂನಾವಾಲಾನನ್ನು ರೋಹಿಣಿಯಲ್ಲಿರುವ ಎಫ್‌ಎಸ್‌ಎಲ್ ಗೆ ಕರೆದೊಯ್ಯಲು ಅನುಮತಿ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅದಕ್ಕೆ ಅನುಮತಿ ನೀಡಿದೆ ಎಂದು ಪೂನಾವಾಲಾ ಪರ ವಕೀಲ ಅಬಿನಾಶ್ ಕುಮಾರ್ ಹೇಳಿದ್ದಾರೆ.
ಇದನ್ನು ಓದಿ: ದೆಹಲಿ: ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಕರೆದೊಯ್ಯತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ
ಆರೋಪಿಯನ್ನು ಈಗಾಗಲೇ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇನ್ನೂ ಉತ್ತರಸಿಗದ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಪೂನಾವಾಲಾನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
28 ವರ್ಷದ ಪೂನಾವಾಲಾ ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಪ್ರೇಯಸಿ ಶ್ರದ್ಧಾ ವಾಲ್ಕರ್ ಅವರನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದನು.