ಕಾಶ್ಮೀರಿ ಪಂಡಿತರು ಎದುರಿಸಿದ ಭಯಾನಕತೆಗೆ ಅಪಮಾನ: 'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ ಚಿತ್ರ ಎಂದ ನಡಾವ್ ಗೆ ಬಿಜೆಪಿ ತಿರುಗೇಟು
'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಅಸಭ್ಯ, ಪ್ರಚಾರದ ಸಾಮಗ್ರಿ ಎಂದು ಕರೆದ ಇಸ್ರೇಲ್ ಮೂಲದ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಗೆ ತಿರುಗೇಟು ನೀಡಿರುವ ಬಿಜೆಪಿ, ಇದು ಕಾಶ್ಮೀರಿ ಪಂಡಿತರು ಎದುರಿಸಿದ ಭಯಾನಕತೆಗೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದೆ.
Published: 29th November 2022 01:06 PM | Last Updated: 29th November 2022 07:11 PM | A+A A-

ದಿ ಕಾಶ್ಮೀರ್ ಫೈಲ್ಸ್ ಸ್ಟಿಲ್
ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಅಸಭ್ಯ, ಪ್ರಚಾರದ ಸಾಮಗ್ರಿ ಎಂದು ಕರೆದ ಇಸ್ರೇಲ್ ಮೂಲದ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಗೆ ತಿರುಗೇಟು ನೀಡಿರುವ ಬಿಜೆಪಿ, ಇದು ಕಾಶ್ಮೀರಿ ಪಂಡಿತರು ಎದುರಿಸಿದ ಭಯಾನಕತೆಗೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದೆ.
ಈ ಕುರಿತು ಭಾರತೀಯ ಜನತಾ ಪಕ್ಷದ ಅಮಿತ್ ಮಾಳವಿಯಾ ಅವರು ಮಂಗಳವಾರ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲ್ಯಾಪಿಡ್ ಅವರ ದಿ ಕಾಶ್ಮೀರ್ ಫೈಲ್ಸ್ ಖಂಡನೆಯನ್ನು ಹತ್ಯಾಕಾಂಡದ ನಿರಾಕರಣೆಗೆ ಹೋಲಿಸಿದ್ದಾರೆ, ಹಿಟ್ಲರ್ ಆಡಳಿತವು ಲಕ್ಷಾಂತರ ಯಹೂದಿಗಳನ್ನು ಕೊಂದಿತ್ತು ಅದೂ ಕೂಡ ಪ್ರಚಾರದ ಗೀಳೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 'ಕಾಶ್ಮೀರ್ ಫೈಲ್ಸ್' ಅಸಭ್ಯ ಚಿತ್ರ ಎಂದ ನಡಾವ್ ಗೆ ನಾಚಿಕೆಯಾಗಬೇಕು: ಇಸ್ರೇಲ್ ರಾಯಭಾರಿ ಆಕ್ರೋಶ
ಅಂತೆಯೇ ದೀರ್ಘಕಾಲದಿಂದ ಜನರು ಹತ್ಯಾಕಾಂಡವನ್ನು ನಿರಾಕರಿಸುತ್ತಾ ಬಂದಿದ್ದಾರೆ. ಕೆಲವರು ಕಾಶ್ಮೀರ ಫೈಲ್ ಚಿತ್ರಕ್ಕೆ ಮಾಡುತ್ತಿರುವಂತೆ ಷಿಂಡ್ಲರ್‌ಗಳ ಪಟ್ಟಿಯನ್ನು ಪ್ರಚಾರ ಎಂದು ಕರೆದರು. ಆದರೆ ಏನೇ ಇರಲಿ ಸತ್ಯವು ಅಂತಿಮವಾಗಿ ಜಯಗಳಿಸುತ್ತದೆ ಎಂದು ಹೇಳಿದ್ದಾರೆ.
Israel’s Ambassador responds to compatriot filmmaker Nadav Lapid’s criticism of Kashmir Files. For the longest time, people even denied the Holocaust and called Schindler’s List a propaganda, just like some are doing to Kashmir Files.
— Amit Malviya (@amitmalviya) November 29, 2022
Truth eventually triumphs, no matter what… https://t.co/duU36qNjDg
ಬಿಜೆಪಿಯ ಗೋವಾ ವಕ್ತಾರ ಸವಿಯೋ ರೋಡ್ರಿಗಸ್ ಅವರು ನಾಡವ್ ಲ್ಯಾಪಿಡ್ ಅವರ ಕಾಮೆಂಟ್‌ಗಳನ್ನು ಟೀಕಿಸಿದ್ದು, ಇದು "ಕಾಶ್ಮೀರಿ ಹಿಂದೂಗಳು ಎದುರಿಸುತ್ತಿರುವ ಭೀಕರತೆಗೆ" ಅವಮಾನವಾಗಿದೆ. ಇಸ್ರೇಲಿ ಚಲನಚಿತ್ರ ನಿರ್ಮಾಪಕ ಲ್ಯಾಪಿಡ್ ಕಾಶ್ಮೀರದಲ್ಲಿ ಸಂಭವಿಸಿದ ಭಯಾನಕತೆಯ ಸತ್ಯದ ಬಗ್ಗೆ ಅಜ್ಞಾನ ಹೊಂದಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್' ನಂತರ ಕಾಶ್ಮೀರದಲ್ಲಿ ಗರಿಷ್ಠ ಸಂಖ್ಯೆಯ ಜನರ ಹತ್ಯೆ- ಸಂಜಯ್ ರಾವತ್
ಸೋಮವಾರ ರಾತ್ರಿ ಗೋವಾದಲ್ಲಿ ನಡೆದ ಐಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ ಇಸ್ರೇಲಿ ಚಲನಚಿತ್ರ ನಿರ್ಮಾಪಕ ಲ್ಯಾಪಿಡ್ ಕಾಶ್ಮೀರ್ ಫೈಲ್ಸ್ ಅನ್ನು "ಪ್ರಚಾರದ ಚಲನಚಿತ್ರ" ಮತ್ತು "ಅಶ್ಲೀಲ" ಎಂದು ಬಣ್ಣಿಸಿದ್ದರು. ಅವರು ಚಲನಚಿತ್ರ ಗಾಲಾ ತೀರ್ಪುಗಾರರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಭಾಷಣದಲ್ಲಿ ಲ್ಯಾಪಿಡ್ ಅವರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದನ್ನು ನೋಡಿ "ವಿಚಲಿತ ಮತ್ತು ಆಘಾತಕ್ಕೊಳಗಾಗಿದ್ದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಡ್ರಿಗಸ್, ಗೋವಾದಲ್ಲಿ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ, "ದಿ ಕಾಶ್ಮೀರ್ ಫೈಲ್ಸ್ ಕುರಿತು ಚಲನಚಿತ್ರ ನಿರ್ಮಾಪಕ ಮತ್ತು ಐಎಫ್‌ಎಫ್‌ಐ ಜ್ಯೂರಿ ಮುಖ್ಯಸ್ಥ ನಾದವ್ ಲ್ಯಾಪಿಡ್ ಅವರು ನೀಡಿದ ಹೇಳಿಕೆಯು ಕಾಶ್ಮೀರ ಹಿಂದೂಗಳು (ಹಿಂದೆ) ಎದುರಿಸುತ್ತಿರುವ ಭೀಕರತೆಗೆ ಅವಮಾನವಾಗಿದೆ. ನೀವು ಚಲನಚಿತ್ರವನ್ನು ಕಲಾತ್ಮಕವಾಗಿ ವಿಮರ್ಶಿಸಬಹುದು. ಆದರೆ ಕಾಶ್ಮೀರಿ ಪಂಡಿತರ ಪ್ರಚಾರದಿಂದ ಎದುರಿಸುತ್ತಿರುವ ಕ್ರೂರತೆಯ ಬಗ್ಗೆ ಸತ್ಯವನ್ನು ಹೇಳುವುದು ನಾಚಿಕೆಗೇಡಿನ ಸಂಗತಿ" ಎಂದು ಹೇಳಿದರು.
ಇದನ್ನೂ ಓದಿ: 'ಕಾಶ್ಮೀರ್ ಫೈಲ್ಸ್' ಅಶ್ಲೀಲ, ಪ್ರಚಾರ ಪ್ರಿಯ ಚಿತ್ರ ಎಂದ ಐಎಫ್ಎಫ್ಐ ಜ್ಯೂರಿ ಮುಖ್ಯಸ್ಥನಿಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು
ಕಾಶ್ಮೀರ ಫೈಲ್ಸ್ ಕುರಿತು ಲ್ಯಾಪಿಡ್ ಅವರ ಅಭಿಪ್ರಾಯಗಳನ್ನು ಒಪ್ಪಲಾಗುವುದಿಲ್ಲ. ಎರಡು ಬಾರಿ ಅದನ್ನು ವೀಕ್ಷಿಸಿದಾಗ, ಅದು 'ಅಶ್ಲೀಲ ಅಥವಾ ಪ್ರಚಾರ' ಎಂದು ನನಗೆ ಕಂಡುಬಂದಿಲ್ಲ. ಇದು ಕೇವಲ ಕಾಶ್ಮೀರಿ ಪಂಡಿತರ ಮೇಲೆ ನಡೆದ ಕ್ರೂರತೆಯ ಬಗ್ಗೆ ಕ್ರೂರ ಸತ್ಯವನ್ನು ಹೇಳಿದೆ" ಎಂದು ರಾಡ್ರಿಗಸ್ ಹೇಳಿದರು.