ಗುಜರಾತ್ ಚುನಾವಣೆ: ಗೆಹ್ಲೋಟ್ ರ್ಯಾಲಿ ವೇಳೆ ನುಗ್ಗಿಬಂದ ಗೂಳಿ, ಬಿಜೆಪಿ ಪಿತೂರಿ ಎಂದ ರಾಜಸ್ಥಾನ ಸಿಎಂ

ಗುಜರಾತ್ ನಲ್ಲಿ ಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದೆ. ಏತನ್ಮಧ್ಯೆ, ಗುಜರಾತ್ ಚುನಾವಣೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಮೆಹ್ಸಾನಾ (ಗುಜರಾತ್): ಗುಜರಾತ್ ನಲ್ಲಿ ಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದೆ. ಏತನ್ಮಧ್ಯೆ, ಗುಜರಾತ್ ಚುನಾವಣೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾಷಣ ಮಾಡುತ್ತಿದ್ದಾಗ ಗೂಳಿಯೊಂದು ನುಗ್ಗಿ ಬಂದಿದ್ದು, ಇದರಿಂದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನತೆ ದಿಕ್ಕಾಪಾಲಾಗಿ ಓಡಿದ್ದಾರೆ.

ಸೋಮವಾರ, ಗುಜರಾತ್‌ನ ಮೆಹ್ಸಾನಾದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಚುನಾವಣಾ ರ್ಯಾಲಿ ಇತ್ತು. ರ್ಯಾಲಿ ನಡೆಯುತ್ತಿದ್ದ ವೇಳೆಯೇ ಗೂಳಿ ಮುನ್ನುಗ್ಗಿ ಬಂದಿತ್ತು. ಜನರು ಭಯಭೀತರಾಗಿ ಓಡುತ್ತಿರುವುದನ್ನು ನೋಡಿದ ಗೆಹ್ಲೋಟ್ ಅವರು, ಜನತೆ ಶಾಂತವಾಗಿರಬೇಕು. ಗೂಳಿ ತಾನಾಗಿಯೇ ಹೊರಹೋಗುತ್ತದೆ ಎಂದು ಹೇಳಿದರು. ಅಲ್ಲದೆ, ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಬಿಜೆಪಿಗೆ ಹಿಡಿಶಾಪ ಹಾಕಿರುವ ಅಶೋಕ್ ಗೆಹ್ಲೋಟ್, ನಾನು ಚಿಕ್ಕಂದಿನಿಂದಲೂ ಕಾಂಗ್ರೆಸ್ ಸಭೆ ನಡೆದಾಗಲೆಲ್ಲ ಈ ಬಿಜೆಪಿಗರು ಗೂಳಿ, ಹಸು ಬಿಡುವುದನ್ನು ನೋಡುತ್ತಿದ್ದೇನೆ. ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಭೆಗಳಿಗೆ ಅಡ್ಡಿಪಡಿಸಲು ಇಂತಹ ಇನ್ನಷ್ಟು ತಂತ್ರಗಳನ್ನು ಅನುಸರಿಸಲಿದೆ ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶಗಳು ಹೊರಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com