ಮಲ ಮಗಳನ್ನು ಪೆಟ್ಟಿಗೆಯೊಳಗೆ ಕೂಡಿ ಹಾಕಿದ ಗರ್ಭಿಣಿ! ಕೊಲೆ ಯತ್ನ ಕೇಸ್ ದಾಖಲು
ಮಲ ಮಗಳನ್ನು ಪೆಟ್ಟಿಗೆಯೊಳಗೆ ಕೂಡಿ ಹಾಕಿದ ಆರೋಪದ ಮೇರೆಗೆ ಮಹಿಳೆಯೊಬ್ಬರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶದ ಮುಜಾಫರ್ ನಗರದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Published: 29th November 2022 12:51 PM | Last Updated: 29th November 2022 07:09 PM | A+A A-

ಸಾಂದರ್ಭಿಕ ಚಿತ್ರ
ಮುಜಾಫರ್ ನಗರ: ಮಲ ಮಗಳನ್ನು ಪೆಟ್ಟಿಗೆಯೊಳಗೆ ಕೂಡಿ ಹಾಕಿದ ಆರೋಪದ ಮೇರೆಗೆ ಮಹಿಳೆಯೊಬ್ಬರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶದ ಮುಜಾಫರ್ ನಗರದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿ ಶಿಲ್ಫಿ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಗರ್ಭಿಣಿಯಾಗಿದ್ದು, ಇನ್ನೂ ಬಂಧಿಸಿಲ್ಲ. ಮಲ ಮಗಳು ರಾಧಿಕಾ ಮಂಗಳವಾರ ಸಂಜೆಯಿಂದ ನಾಪತ್ತೆಯಾದ ವರದಿಯಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಪೆಟ್ಟಿಗೆಯೊಳಗೆ ಅರೆಪ್ರಜ್ಞೆ ಸ್ಥಿತಿಯಲ್ಲಿ ರಾಧಿಕಾ ಇರುವುದು ಪತ್ತೆಯಾಯಿತು ಎಂದು ಪೊಲೀಸ್ ಉಪ ಮಹಾನಿರ್ದೇಶಕ ಅಯುಶ್ ವಿಕ್ರಮ್ ಸಿಂಗ್ ಹೇಳಿದರು.
ಮಲತಾಯಿಯೇ ತನನ್ನು ಪೆಟ್ಟಿಯೊಳಗೆ ಹಾಕಿ ಲಾಕ್ ಮಾಡಿದ್ದಾಗಿ ಬಾಲಕಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ. ಮಲ ತಂದೆ ಸೋನು ಶರ್ಮಾ ಮೊದಲ ಹೆಂಡತಿಯಿಂದ ವಿಚ್ಚೇದನ ಪಡೆದ ಬಳಿಕ ಶಿಲ್ಫಿ ಅವರನ್ನು ವಿವಾಹವಾಗಿದ್ದ. ರಾಧಿಕಾ ಅವರೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.