
ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಜ್ಯೂರಿ ಮುಖ್ಯಸ್ಥರು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿರುವುದರ ಮಧ್ಯೆ ಸುಪ್ರೀಂ ಕೋರ್ಟ್ ನಲ್ಲಿ ಅಭ್ಯಾಸನಿರತ ವಕೀಲರೊಬ್ಬರು ಮಂಗಳವಾರ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿನ್ನೆ 53ನೇ ಐಎಫ್ಎಫ್ಐ ಸಮಾರೋಪ ಸಮಾರಂಭದಲ್ಲಿ ಜ್ಯೂರಿ ಮುಖ್ಯಸ್ಥ ನಡವ್ ಲ್ಯಾಪಿಡ್ ಆಡಿದ್ದ ಮಾತು ವಿವಾದದ ಬೆಂಕಿ ಹಚ್ಚಿದ್ದು ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ, ಮುಗ್ಧ ಕಾಶ್ಮೀರ ಪಂಡಿತರನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೇಸು ದಾಖಲಿಸಿದ್ದಾರೆ.
ಅಡ್ವೊಕೇಟ್ ವಿನೀತ್ ಜಿಂದಾಲ್ ಎಂಬುವವರು ನಡವ್ ಲ್ಯಾಪಿಡ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121, 153, 153ಎ ಮತ್ತು ಬಿ, 295, 298 ಮತ್ತು 505ರಡಿಯಲ್ಲಿ ಕೇಸು ದಾಖಲಿಸಿದ್ದಾರೆ. 1990ರ ದಶಕದಲ್ಲಿ ಇಸ್ಲಾಂ ಭಯೋತ್ಪಾದಕರಿಂದ ಕಾಶ್ಮೀರ ಕಣಿವೆಯಲ್ಲಿ ಮುಗ್ಧ ಕಾಶ್ಮೀರ ಪಂಡಿತರನ್ನು ಕ್ರೂರವಾಗಿ ಹತ್ಯೆ ಮಾಡುತ್ತಿದ್ದರ ಮೇಲೆ ಬೆಳಕು ಚೆಲ್ಲುವ ಕಥೆ ದಿ ಕಾಶ್ಮೀರ್ ಫೈಲ್ಸ್. ಇಸ್ಲಾಂ ಭಯೋತ್ಪಾದಕರಿಂದ ಹಿಂದೂ ನರಮೇಧವಾಗಿದ್ದು ಅದನ್ನು ಚಿತ್ರದಲ್ಲಿ ತೋರಿಸಿರುವುದನ್ನು ಅಶ್ಲೀಲ, ಪ್ರಚಾರದ ಹುಚ್ಚು ಎಂದು ಕರೆದು ಭಾರತೀಯ ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement