'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ, ಕೀಳು ಅಭಿರುಚಿಯದ್ದು; ನಾವು ವಿಚಲಿತರಾಗಿದ್ದು, ಆಘಾತಕ್ಕೊಳಗಾಗಿದ್ದೇವೆ; ಐಎಫ್ಎಫ್ಐ ತೀರ್ಪುಗಾರರ ಮುಖ್ಯಸ್ಥ!
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು 53ನೇ ಭಾರತೀಯ ಚಲನಚಿತ್ರೋತ್ಸವದ(ಐಎಫ್‌ಎಫ್ಐ) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲ್ಯಾಪಿಡ್ ಬಣ್ಣಿಸಿದ್ದಾರೆ.
Published: 29th November 2022 09:25 AM | Last Updated: 16th December 2022 12:09 PM | A+A A-

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸ್ಟಿಲ್
ನವದೆಹಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು 53ನೇ ಭಾರತೀಯ ಚಲನಚಿತ್ರೋತ್ಸವದ(ಐಎಫ್‌ಎಫ್ಐ) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲ್ಯಾಪಿಡ್ ಬಣ್ಣಿಸಿದ್ದಾರೆ.
ಐಎಫ್‌ಎಫ್‌ಐ 2022ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಲ್ಯಾಪಿಡ್ ಅವರು, ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ನೋಡಿ ವಿಚಲಿತನಾಗಿದ್ದು, ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ. ‘ಈ ಅಭಿಪ್ರಾಯವನ್ನು ನಿಮ್ಮೊಂದಿಗೆ ಬಹಿರಂಗವಾಗಿ ಹಂಚಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ಏಕೆಂದರೆ, ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಈ ವೇದಿಕೆ ಸ್ವೀಕರಿಸುತ್ತದೆ’ಎಂದು ಲ್ಯಾಪಿಡ್ ಹೇಳಿದರು.
‘ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ನಾವು ವಿಚಲಿತರಾಗಿದ್ದು, ಆಘಾತಕ್ಕೊಳಗಾಗಿದ್ದೇವೆ. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಮತ್ತು ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲದ ಪ್ರಚಾರ ಮತ್ತು ಅಸಭ್ಯ ಚಲನಚಿತ್ರದಂತೆ ನಮಗೆ ಭಾಸವಾಯಿತು’ ಎಂದು ಅವರು ಹೇಳಿದ್ದಾರೆ.
‘ಕಾಶ್ಮೀರ್ ಫೈಲ್ಸ್’ ಅಸಭ್ಯ, ಕೀಳು ಅಭಿರುಚಿಯ ಚಿತ್ರ. ಪ್ರಚಾರದ ಉದ್ದೇಶದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ’ ಎಂದು ಐಎಫ್‌ಎಫ್‌ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರಾದ ನಾಡವ್ ಲ್ಯಾಪಿಡ್ ಹೇಳಿದ್ದಾರೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ವಿರುದ್ಧ ಐಎಫ್ ಎಫ್ಐ ಜ್ಯೂರಿ ಮುಖ್ಯಸ್ಥ ಅವಹೇಳನಕಾರಿ ಟೀಕೆ: ಸುಪ್ರೀಂ ಕೋರ್ಟ್ ವಕೀಲರಿಂದ ಕೇಸು ದಾಖಲು
‘ಸ್ಪರ್ಧೆಗೆ ಬಂದಿದ್ದ 15ರಲ್ಲಿ 14ಕ್ಕೆ ಚಲನಚಿತ್ರದ ಲಕ್ಷಣಗಳಿದ್ದು, ಚರ್ಚೆಗೆ ಒಳಪಟ್ಟವು. 15ನೇ ಚಿತ್ರ, ‘ಕಾಶ್ಮೀರ್ ಫೈಲ್ಸ್’ ವೀಕ್ಷಣೆಯ ನಂತರ ನಾವು ದಿಗ್ಭ್ರಮೆಗೊಂಡಿದ್ದು, ವಿಚಲಿತರಾದೆವು. ಇದು, ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಬಂದ ಪ್ರಚಾರದ ಉದ್ದೇಶದ, ಅಸಭ್ಯ ಚಿತ್ರ’ ಎಂದು ಹೇಳಿದರು.
ಗೋಲ್ಡನ್, ಪೀಕಾಕ್ಸ್ ಪ್ರಶಸ್ತಿಗೆ ಸೇರಿದಂತೆ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವ ಹೊಣೆ ತೀರ್ಪುಗಾರ ಮಂಡಳಿಯದಾಗಿತ್ತು. ‘ನಮಗಾದ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಮುಕ್ತವಾಗಿದ್ದೇನೆ. ಕಲೆ, ಬದುಕಿಗೆ ಅಗತ್ಯವಾಗಿರುವ ವಿಮರ್ಶೆ ಸ್ವೀಕರಿಸುವುದು ಅಗತ್ಯ ಎಂದರು. ಒಪ್ಪಿಕೊಳ್ಳುವುದು ಅಗತ್ಯ‘ ಎಂದು ಹೇಳಿದರು. ಮಾರ್ಚ್ 11ರಂದು ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್', ಐಎಫ್‌ಎಫ್‌ಐನಲ್ಲಿ ಭಾರತೀಯ ಪನೋರಮಾ ವಿಭಾಗದ ಭಾಗವಾಗಿತ್ತು.
#Breaking: #IFFI Jury says they were “disturbed and shocked” to see #NationalFilmAward winning #KashmirFiles, “a propoganda, vulgar movie” in the competition section of a prestigious festival— organised by the Govt of India.
— Navdeep Yadav (@navdeepyadav321) November 28, 2022
Over to @vivekagnihotri sir…
@nadavlapi pic.twitter.com/ove4xO8Ftr