ಶ್ರದ್ಧಾ ವಾಕರ್ ಹತ್ಯೆ ಆರೋಪಿ ಆಫ್ತಾಬ್ ಪೂನಾವಾಲಾ ಹತ್ಯೆಗೆ ಯತ್ನ! ವಿಡಿಯೋ
ತನ್ನ ಲಿವ್ ಇನ್ ರಿಲೇಶನ್ ಶಿಫ್ ನಲ್ಲಿದ್ದ ಪ್ರೇಯಸಿ, ಶ್ರದ್ಧಾ ವಾಕರ್ ಅವರನ್ನು ತುಂಡು ತಂಡಾಗಿ ಕತ್ತರಿಸಿದ ಆರೋಪಿ ಆಫ್ತಾಬ್ ಪೊನಾವಾಲಾನ ಮೇಲೆ ಕತ್ತಿ ಬೀಸಿ ಕೊಲಲ್ಲು ಯತ್ನ ನಡೆಸಲಾಗಿದೆ.
Published: 29th November 2022 11:26 AM | Last Updated: 29th November 2022 11:52 AM | A+A A-

ಪೊಲೀಸ್ ವ್ಯಾನ್ ಮೇಲೆ ದಾಳಿಗೆ ಯತ್ನಿಸುತ್ತಿರುವ ವ್ಯಕ್ತಿಗಳ ಚಿತ್ರ
ನವದೆಹಲಿ: ತನ್ನ ಲಿವ್ ಇನ್ ರಿಲೇಶನ್ ಶಿಫ್ ನಲ್ಲಿದ್ದ ಪ್ರೇಯಸಿ, ಶ್ರದ್ಧಾ ವಾಕರ್ ಅವರನ್ನು ತುಂಡು ತಂಡಾಗಿ ಕತ್ತರಿಸಿದ ಆರೋಪಿ ಆಫ್ತಾಬ್ ಪೊನಾವಾಲಾನ ಮೇಲೆ ಕತ್ತಿ ಬೀಸಿ ಕೊಲಲ್ಲು ಯತ್ನ ನಡೆಸಲಾಗಿದೆ.
ರಾಷ್ಟ್ರ ರಾಜಧಾನಿಯ ವಿಧಿ ವಿಜ್ಞಾನ ಪ್ರಯೋಗಾಲಯದ ಹೊರಗಡೆ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಹಿಂದೂ ಸೇನೆ ಎಂದು ಹೇಳಿಕೊಂಡ ಇಬ್ಬರು ವ್ಯಕ್ತಿಗಳು, ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿ ಹಂತಕನ ಹತ್ಯೆಗೆ ಯತ್ನಿಸಿದ್ದಾರೆ.
ಆಫ್ತಾಬ್ ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ಕತ್ತಿಯಿಂದ ದಾಳಿ ನಡೆಸಿ, ಬಾಗಿಲು ತೆಗೆಯಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೂಡಲೇ ವ್ಯಾನ್ ನಿಂದ ಇಳಿದ ಪೊಲೀಸರು ಗನ್ ತೋರಿಸುವ ಮೂಲಕ ದಾಳಿಕೋರರರು ಅಲ್ಲಿಂದ ತೆರಳುವಂತೆ ಮಾಡಿದ್ದಾರೆ. ಪೊಲೀಸ್ ವ್ಯಾನ್ ಸ್ಥಳ ತಲುಪುತ್ತಿದ್ದಂತೆಯೇ ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
#WATCH | Police van carrying Shradhha murder accused Aftab Poonawalla attacked by at least 2 men carrying swords who claim to be from Hindu Sena, outside FSL office in Delhi pic.twitter.com/Bpx4WCvqXs
— ANI (@ANI) November 28, 2022