ರೀಟೇಲ್ ಡಿಜಿಟಲ್ ರೂಪಾಯಿ ವಹಿವಾಟು: ಆರ್ ಬಿಐಯಿಂದ ನಾಳೆ ಪ್ರಾಯೋಗಿಕ ಮಾದರಿ ಜಾರಿ
ಚಿಲ್ಲರೆ ಡಿಜಿಟಲ್ ರೂಪಾಯಿ (eRs-R)ನ್ನು ನಾಳೆ ಅಂದರೆ ಡಿಸೆಂಬರ್ 1ರಿಂದ ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ತಿಳಿಸಿದೆ.
Published: 30th November 2022 10:38 AM | Last Updated: 30th November 2022 02:03 PM | A+A A-

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಮುಂಬೈ: ಚಿಲ್ಲರೆ ಡಿಜಿಟಲ್ ರೂಪಾಯಿ (eRs-R)ನ್ನು ನಾಳೆ ಅಂದರೆ ಡಿಸೆಂಬರ್ 1ರಿಂದ ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ತಿಳಿಸಿದೆ.
ಇನ್ನು ಒಂದು ತಿಂಗಳಲ್ಲಿ ಚಿಲ್ಲರೆ ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುವುದಾಗಿ ಆರ್ ಬಿಐ ಅಕ್ಟೋಬರ್ 31ರಂದು ತಿಳಿಸಿತ್ತು. ಗ್ರಾಹಕರು ಮತ್ತು ವ್ಯಾಪಾರಿಗಳ ಆಪ್ತ ಬಳಕೆದಾರರ ಗುಂಪು(CUG) ಗಳಲ್ಲಿ ಆಯ್ದ ಕಡೆಗಳಲ್ಲಿ ಆರ್ ಬಿಐ ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುತ್ತಿದ್ದು, ಡಿಜಿಟಲ್ ಟೋಕನ್ ಮಾದರಿಯಲ್ಲಿರಲಿದ್ದು ಕಾನೂನು ಟೆಂಡರ್ ನ್ನು ಪ್ರತಿನಿಧಿಸುತ್ತದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿತ್ತು.
ಕಾಗದದ ಕರೆನ್ಸಿ ಮತ್ತು ನಾಣ್ಯಗಳ ಮಾದರಿಯಲ್ಲಿ ಅದೇ ಮುಖಬೆಲೆಯಲ್ಲಿ ಡಿಜಿಟಲ್ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು. ಮಧ್ಯವರ್ತಿ ಬ್ಯಾಂಕುಗಳ ಮೂಲಕ ಇದನ್ನು ವಿತರಣೆ ಮಾಡಲಾಗುವುದು. ಇದರಲ್ಲಿ ಭಾಗಿಯಾಗುವ ಬ್ಯಾಂಕುಗಳು ಮತ್ತು ಮೊಬೈಲ್ ಫೋನ್ ಗಳು ಮತ್ತು ಸಾಧನಗಳಲ್ಲಿ ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ಇಆರ್ ಎಸ್-ಆರ್ ನ ವಹಿವಾಟು ನಡೆಯುತ್ತದೆ.
Operationalisation of Central Bank Digital Currency – Retail (e₹-R) Pilothttps://t.co/Coh632lCwU
— ReserveBankOfIndia (@RBI) November 29, 2022
ವ್ಯಕ್ತಿಯಿಂದ ವ್ಯಕ್ತಿಗೆಮತ್ತು ವ್ಯಕ್ತಿಯಿಂದ ವ್ಯಾಪಾರಿಗಳಿಗೆ ವಹಿವಾಟು ಸಾಗುತ್ತದೆ. ಕ್ಯುಆರ್ ಕೋಡ್ ಗಳನ್ನು ಬಳಸಿ ವ್ಯಾಪಾರಿಗಳಿಗೆ ಹಣ ಪಾವತಿ ಮಾಡಬಹುದು ಎಂದು ಹೇಳಿಕೆ ತಿಳಿಸಿದೆ. ನಂಬಿಕೆ,ಸುರಕ್ಷತೆ ಮತ್ತು ವಹಿವಾಟಿನಲ್ಲಿ ಸರಾಗತೆಯನ್ನು ಡಿಜಿಟಲ್ ಪಾವತಿಯಲ್ಲಿ ಆರ್ ಬಿಐ ನೀಡುತ್ತದೆ.
ಆರ್ ಬಿಐಯ ಈ ಪ್ರಾಯೋಗಿಕ ಮಾದರಿ ಮುಂಬೈ, ದೆಹಲಿ, ಬೆಂಗಳೂರು, ಭುವನೇಶ್ವರಗಳಲ್ಲಿ ಆರಂಭದಲ್ಲಿ ನಡೆಯಲಿದ್ದು ನಂತರ ಅಹಮದಾಬಾದ್, ಗಾಂಗ್ಟ್ಯಾಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನ, ಶಿಮ್ಲಾಗಳನ್ನು ಒಳಗೊಳ್ಳಲಿದೆ.