ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಸಂಕಷ್ಟ: ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ಎಚ್ಚರಿಕೆ

ಹಿಂದೂ ಧಾರ್ಮಿಕ ವ್ಯಕ್ತಿಗಳನ್ನು `ತಪ್ಪು' ರೀತಿಯಲ್ಲಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮುಂಬರುವ ಬಾಲಿವುಡ್ ಚಿತ್ರ 'ಆದಿಪುರುಷ' ನಿರ್ಮಾಪಕರಿಗೆ  ಎಚ್ಚರಿಸಿದ್ದಾರೆ.
ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ
ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ

ಭೋಪಾಲ್: ಹಿಂದೂ ಧಾರ್ಮಿಕ ವ್ಯಕ್ತಿಗಳನ್ನು `ತಪ್ಪು' ರೀತಿಯಲ್ಲಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮುಂಬರುವ ಬಾಲಿವುಡ್ ಚಿತ್ರ 'ಆದಿಪುರುಷ' ನಿರ್ಮಾಪಕರಿಗೆ  ಎಚ್ಚರಿಸಿದ್ದಾರೆ.

ನಟ ಪ್ರಭಾಸ್ ಭಗವಾನ್ ರಾಮನಾಗಿ, ಸೈಫ್ ಅಲಿ ಖಾನ್ ರಾವಣನಾಗಿ ಮತ್ತು ಕೃತಿ ಸನೋನ್ ಸೀತೆಯಾಗಿ ನಟಿಸಿರುವ ಓಂ ರಾವುತ್ ನಿರ್ದೇಶನದ ಚಿತ್ರದ ಮೊದಲ ಟೀಸರ್ ಮತ್ತು ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ.

'ನಾನು ಆದಿಪುರುಷ ಚಿತ್ರದ ಟ್ರೈಲರ್ ನೋಡಿದ್ದೇನೆ. ಅದರಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ಟ್ರೈಲರ್‌ನಲ್ಲಿ ಕಂಡುಬರುವ ಹಿಂದೂ ದೇವತೆಗಳ ಉಡುಪುಗಳು ಮತ್ತು ನೋಟವು ಸ್ವೀಕಾರಾರ್ಹವಲ್ಲ' ಎಂದು ರಾಜ್ಯ ಸರ್ಕಾರದ ವಕ್ತಾರರೂ ಆಗಿರುವ ಮಿಶ್ರಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ಹನುಮಾನ್ ಜಿಗೆ ಚರ್ಮವನ್ನು ಧರಿಸಿ ತೋರಿಸಲಾಗಿದೆ. ಆದರೆ, ದೇವರ ವೇಷಭೂಷಣದ ವಿವರಣೆ (ಶಾಸ್ತ್ರಗಳಲ್ಲಿ) ವಿಭಿನ್ನವಾಗಿದೆ. ಇದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ದೃಶ್ಯಗಳಾಗಿವೆ. ಅಂತಹ ಎಲ್ಲಾ ದೃಶ್ಯಗಳನ್ನು ಚಲನಚಿತ್ರದಿಂದ ತೆಗೆದುಹಾಕಲು ನಾನು ಓಂ ರಾವುತ್‌ಗೆ ಪತ್ರ ಬರೆಯುತ್ತಿದ್ದೇನೆ. ತೆಗೆದುಹಾಕದಿದ್ದರೆ, ನಾವು ಕಾನೂನು ಕ್ರಮವನ್ನು ಕೈಗೊಳ್ಳಲು ಪರಿಗಣಿಸುತ್ತೇವೆ' ಎಂದು ಮಿಶ್ರಾ ಹೇಳಿದರು.

ಅವರು ತಮ್ಮ ವಾದವನ್ನು ಬೆಂಬಲಿಸುವ ಧಾರ್ಮಿಕ ಪಠ್ಯವನ್ನು ಸಹ ಉಲ್ಲೇಖಿಸಿದ್ದಾರೆ.
ಚಿತ್ರ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವರು ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ.

ಈ ವರ್ಷ ಜುಲೈನಲ್ಲಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ 'ಕಾಳಿ'ಯ ವಿವಾದಾತ್ಮಕ ಪೋಸ್ಟರ್ ಕುರಿತು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸುವಂತೆ ಅವರು ರಾಜ್ಯ ಪೊಲೀಸರಿಗೆ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com