ಅತಿ ಕೆಟ್ಟ ಸನ್ನಿವೇಶಕ್ಕೆ ಸಿದ್ಧರಾಗುತ್ತಿದ್ದೇವೆ: ಐಎಎಫ್ ಮುಖ್ಯಸ್ಥರ ಮಾತಿನ ಹಿಂದಿನ ಮರ್ಮವೇನು...?
ಭಾರತೀಯ ವಾಯುಪಡೆ ಈಶಾನ್ಯ ಲಡಾಖ್ ನಲ್ಲಿ ಗಡಿ ನಿಯಂತ್ರಣ ರೇಖೆಯಾದ್ಯಂತ ಚೀನಾ ಚಟುವಟಿಕೆಗಳನ್ನು ಎದುರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ವಿಆರ್ ಚೌಧರಿ ಹೇಳಿದ್ದಾರೆ.
Published: 04th October 2022 04:46 PM | Last Updated: 05th October 2022 04:55 PM | A+A A-

ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿ ಆರ್ ಚೌಧರಿ
ನವದೆಹಲಿ: ಭಾರತೀಯ ವಾಯುಪಡೆ ಈಶಾನ್ಯ ಲಡಾಖ್ ನಲ್ಲಿ ಗಡಿ ನಿಯಂತ್ರಣ ರೇಖೆಯಾದ್ಯಂತ ಚೀನಾ ಚಟುವಟಿಕೆಗಳನ್ನು ಎದುರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ವಿಆರ್ ಚೌಧರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಚೌಧರಿ, ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಪರಿಸ್ಥಿತಿಯಲ್ಲಿ, ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಸೇನಾ ಸಾಮರ್ಥ್ಯವನ್ನು ಪ್ರದರ್ಶನ ಮಾಡುವ ಅಗತ್ಯವಿದೆ ಎಂದು ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಅತಿ ಕೆಟ್ಟ ಸನ್ನಿವೇಶ ಎದುರಾದರೂ ಅದನ್ನೂ ಸೇರಿ ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವುದಕ್ಕೂ ವಾಯುಪಡೆ ಸಿದ್ಧಗೊಳ್ಳುತ್ತಿದೆ ಎಂದು ವಾಯುಪಡೆ ಮುಖ್ಯಸ್ಥರು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಾದ್ಯಂತ ಚೀನಾ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ, ಅಪ್ರಚೋದನಾತ್ಮಕ ಕ್ರಮಗಳ ಮೂಲಕ ಚೀನಾ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡುವ ಕೆಲಸ ಆಗುತ್ತಿದೆ, ಈಶಾನ್ಯ ಲಡಾಖ್ ನಲ್ಲಿ ಎಲ್ಲಾ ಸಂಘರ್ಷ ಕೇಂದ್ರಬಿಂದುಗಳಿಂದಲೂ ಸೇನಾ ಹಿಂತೆಗೆತವನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಸಹಜ ಸ್ಥಿತಿ ಸಾಧ್ಯ ಎಂದು ಹೇಳಿದ್ದಾರೆ.